ಎಸ್​ ಬಿ ಐ ಪ್ರಾದೇಶಿಕ ವ್ಯವಹಾರ ಕಚೇರಿ ರೀಜನಲ್​ ಮ್ಯಾನೇಜರ್​ ಬಿ.ಪ್ರಕಾಶ್​ ಅಡಿಗ ಪೊಲೀಸ್​ ಅಧೀಕ್ಷಕ ಹರಿರಾಂ ಶಂಕರ್​ ಸಮ್ಮುಖದಲ್ಲಿ ಚೆಕ್ಕನ್ನು ಹಸ್ತಾಂತರಿಸಿದರು. 
ಉಡುಪಿ

ಪೊಲೀಸ್​ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್​ ಹಸ್ತಾಂತರ

ಉಡುಪಿ: ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್​ ಸಿಬ್ಬಂದಿ ಅರ್ಜುನ ಶಂಕರ ನೆಲ್ಲೂರ ಅವರ ಅವಲಂಬಿತರಿಗೆ ಎಸ್​.ಬಿ.ಐ. ಪೊಲೀಸ್​ ಸ್ಯಾಲರಿ ಪ್ಯಾಕೇಜ್​ ಯೋಜನೆಯಡಿ 1.45 ಕೋಟಿ ರೂ. ಮೊತ್ತದ ವಿಮಾ ಚೆಕ್​ ಹಸ್ತಾಂತರ ಕಾಯಕ್ರಮ ಜಿಲ್ಲಾ ಪೊಲೀಸ್​ ಅಧೀಕ್ಷಕರ ಕಚೇರಿಯಲ್ಲಿ ನಡೆಯಿತು.
ಎಸ್​ ಬಿ ಐ ಪ್ರಾದೇಶಿಕ ವ್ಯವಹಾರ ಕಚೇರಿ ರೀಜನಲ್​ ಮ್ಯಾನೇಜರ್​ ಬಿ.ಪ್ರಕಾಶ್​ ಅಡಿಗ ಪೊಲೀಸ್​ ಅಧೀಕ್ಷಕ ಹರಿರಾಂ ಶಂಕರ್​ ಸಮ್ಮುಖದಲ್ಲಿ ಸಿಬ್ಬಂದಿ ಅವಲಂಬಿತರಿಗೆ ಈ ವೈಯಕ್ತಿಕ ಅಪಘಾತ ವಿಮೆಯ ಚೆಕ್ಕನ್ನು ಹಸ್ತಾಂತರಿಸಿದರು. ಈ ಸಂದಭದಲ್ಲಿ ಮಾತನಾಡಿದ ಪ್ರಕಾಶ ಅಡಿಗ, ಪೊಲೀಸ್​ ಇಲಾಖೆ ಮತ್ತು ಎಸ್​.ಬಿ.ಐ. ನಡುವಿನ ಒಪ್ಪಂದದಂತೆ ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಈ ವಿಮಾ ಸೌಲಭ್ಯ ದೊರಕಿದೆ. ಇಂಥ ವಿಮಾ ಯೋಜನೆಗಳು ಎಲ್ಲಾ ಎಸ್​ಬಿಐ ಶಾಖೆಗಳಲ್ಲಿ ಲಭ್ಯವಿದ್ದು, ಸದುಪಯೋಗವನ್ನು ಪೊಲೀಸ್​ ಇಲಾಖೆಯ ಸಿಬ್ಬಂದಿ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಎಸ್​.ಬಿ.ಐ. ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್​, ಮಲ್ಪೆ ಶಾಖೆಯ ಮೆನೇಜರ್​ ರಾಜೇಶ್​ ಗಂಗೊಳ್ಳಿ, ಅಧಿಕಾರಿಗಳಾದ ಶ್ರೀನಿವಾಸ್​, ಪ್ರಣವ್​ ಪೈ , ತನ್ಮಯ್​ ಉಪಸ್ಥಿತರಿದ್ದರು. 2023-24ನೇ ಸಾಲಿನಲ್ಲಿ ಸಿ.ಎಸ್​.ಪಿ. ಜಿಲ್ಲಾ ನಿಯಂತ್ರಣ ಕೊಠಡಿ, ಉಡುಪಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅರ್ಜುನ ನೆಲ್ಲೂರ ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.