ಮೂಲ್ಕಿಯ ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾದ ಮಣಿನಾಲ್ಕೂರು ಅವರನ್ನು ಗೌರವಿಸಲಾಯಿತು. ಉಪನ್ಯಾಸಕಿ ಆಶಾಲತಾ ಮೊದಲಾದವರಿದ್ದರು.  
ಉಡುಪಿ

ಯುವಕರಲ್ಲಿ ಸಾಮರಸ್ಯ ಮನೋಭಾವ ಮೂಡಿಸಿ

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಯುವಜನಾಂಗ ಕ್ರೌರ್ಯದ ಕಡೆಗೆ ಹೆಜ್ಜೆ ಇಡುತ್ತಿರುವ ಇಂದಿನ ಸಾಮಾಜದಲ್ಲಿ ಯುವಕರಲ್ಲಿ ಬದುಕುವ ಕನಸನ್ನು ಬಿತ್ತುವ ಪ್ರಯತ್ನವಾಗಬೇಕು. ಯುವಕರು ಬದುಕುವ ಹಾಗೂ ಬದುಕಿಸುವ ಕನಸನ್ನು ಕಾಣಬೇಕಾದ್ದು ಇಂದಿನ ತುರ್ತು ಅಗತ್ಯ ಎಂದು ಸಂಪನ್ಮೂಲ ವ್ಯಕ್ತಿ ನಾದ ಮಣಿನಾಲ್ಕೂರು ಹೇಳಿದರು.
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ಘಟಕ ಆಶ್ರಯದಲ್ಲಿ ‘ಬದುಕುವ ಕನಸು - ಈ ಬದುಕು ನನ್ನದು’ ಪರಿಕಲ್ಪನೆಯೊಂದಿಗೆ ಆಯೋಜಿಇಸದ್ದ ‘ಹಾಡು - ಮಾತು - ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಂಜರ್ಸ್ ಘಟಕದ ಸಂಯೋಜಕಿ ಆಶಾಲತಾ ಸಂಪನ್ಮೂಲ ವ್ಯಕ್ತಿ ನಾದ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಉಪನ್ಯಾಸಕ ಡಾ.ಅನಿಲ್ ವಿ.ಚೆರಿಯನ್ ಸ್ವಾಗತಿಸಿದರು.