ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪ್ರೇರಣಾಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಪ್ರಮುಖರಾದ ವಸಂತ ಜೋಗಿ, ಎ.ಶಂಕರ ಐತಾಳ್, ನಾಗೇಶ್ ಕೆ.ನಾಯ್ಕ ಮೊದಲಾದವರಿದ್ದರು.  
ಉಡುಪಿ

ಪ್ರೇರಣಾ ಶಿಬಿರದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬೈಂದೂರು
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಲವು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ಪ್ರೇರಣಾ ಶಿಬಿರವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಶಿಬಿರದಿಂದ ಪ್ರೇರಣೆ ಪಡೆದು ಉತ್ತಮ ಅಂಕ ಗಳಿಸಿದ ಪ್ರತಿ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸುವುದು ಸಂತಸದ ವಿಷಯ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮೃದ್ಧ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕುಂದಾಪುರ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್, ಹಳಗೇರಿ ಜೋಗಿಮನೆ ಟ್ರಸ್ಟ್, ಉಪ್ಪುಂದ ಬೈಂದೂರು ಲಯನ್ಸ್ ಕ್ಲಬ್, ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ನಡೆದ ಪ್ರೇರಣಾಭಿನಂದನೆ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ವಾತನಾಡಿದರು.

ಜೋಗಿಮನೆ ಟ್ರಸ್ಟ್ ಅಧ್ಯಕ್ಷ ವಸಂತ ಜೋಗಿ ಉದ್ಘಾಟಿಸಿದರು. ಕೋಟೇಶ್ವರ ಎಚ್‌ಎಸ್‌ಎನ್ ಫೌಂಡೇಶನ್ ಅಧ್ಯಕ್ಷ ಎ.ಶಂಕರ ಐತಾಳ್ ಪ್ರೇರಣಾ ಟ್ರಸ್ಟ್ ಲಾಂಛನ ಅನಾವರಣಗೊಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕೆ.ನಾಯ್ಕ, ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಹಳೇ ವಿದ್ಯಾರ್ಥಿ ಸಂ ಉಪಾಧ್ಯಕ್ಷ ಉಮೇಶ ನಾಯರಿ, ಲಯನ್ಸ್ ಕ್ಲಬ್ ಉಪ್ಪುಂದ ಬೈಂದೂರು ಅಧ್ಯಕ್ಷ ಉದಯ್ ಡಿ.ಆರ್., ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಮಂಜು ಎಂ. ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಖಾರ್ವಿ ಇದ್ದರು. ಸುವಾ ಆಚಾರ್ ನಿರೂಪಿಸಿದರು. ಎಸ್.ಎನ್.ಆರ್. ಹುಸೈನ್ ಹೈಕಾಡಿ ವಂದಿಸಿದರು.