ಮೂಡುಬಿದಿರೆ ಪ್ರೆಸ್‌ಕ್ಲಬ್ ಪತ್ರಿಕಾ ಭವನ ಕಟ್ಟಡ ಕಾಮಗಾರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ವೀಕ್ಷಿಸಿದರು. ಕಾಮಗಾರಿಯ ಗುತ್ತಿಗೆದಾರ ಕೃಷ್ಣರಾಜ್, ಇಂಜಿನಿಯರ್ ಇಕ್ಬಾಲ್, ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ನವೀನ್ ಸಾಲ್ಯಾನ್ ಮೊದಲಾದವರಿದ್ದರು.
ಮೂಡುಬಿದಿರೆ: ಇಲ್ಲಿನ ಪ್ರವಾಸಿ ಮಂದಿರದ ಬಳಿ ನಿರ್ಮಾಣಗೊಳ್ಳುತ್ತಿರುವ ಮೂಡುಬಿದಿರೆ ಪ್ರೆಸ್‌ಕ್ಲಬ್ ಪತ್ರಿಕಾ ಭವನ ಕಟ್ಟಡದ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಪರಿಶೀಲಿಸಿದರು.
ಕಟ್ಟಡದ ಪ್ರಗತಿ ವೀಕ್ಷಿಸಿದ ಶಾಸಕರು, ಕಾಮಗಾರಿಯ ಗುಣಮಟ್ಟ ಹಾಗೂ ವಿನ್ಯಾಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಟ್ಟಡವನ್ನು ಪತ್ರಕರ್ತರ ವೃತ್ತಿಪರ ಅಗತ್ಯಗಳಿಗೆ ತಕ್ಕಂತೆ ಸುಸಜ್ಜಿತವಾಗಿ ರೂಪಿಸಲು ಪೂರಕವಾದ ಹಲವು ಮಹತ್ವದ ಸಲಹೆ ನೀಡಿದರು.
ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ಸೀತಾರಾಮ್ ಆಚಾರ್ಯ ಶಾಸಕರಿಗೆ ಕಟ್ಟಡದ ನೀಲನಕ್ಷೆ ಹಾಗೂ ಕಾಮಗಾರಿಯ ಹಂತಗಳ ಬಗ್ಗೆ ಮಾಹಿತಿ ನೀಡಿದರು. ಕಾಮಗಾರಿಯ ಗುತ್ತಿಗೆದಾರ ಕೃಷ್ಣರಾಜ್, ಇಂಜಿನಿಯರ್ ಇಕ್ಬಾಲ್, ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ನವೀನ್ ಸಾಲ್ಯಾನ್, ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು, ಕೋಶಾಧಿಕಾರಿ ಪ್ರಸನ್ನ ಹೆಗ್ಡೆ, ಪತ್ರಕರ್ತರ ಸಂಘ ಕಾರ್ಯದರ್ಶಿ ಶರತ್ ದೇವಾಡಿಗ, ಸದಸ್ಯ ಯಶೋಧರ ಬಂಗೇರ ಉಪಸ್ಥಿತರಿದ್ದರು.