Crime 
ಉಡುಪಿ

ಕುಂಬಳೆ ಪಂಚಾಯಿತಿ ಕಡತಗಳ ಪರಿಶೀಲನೆ

ಕುಂಬಳೆ: ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಭಾರಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕುಂಬಳೆ ಗ್ರಾಮ ಪಂಚಾಯಿತಿಗೆ ವಿಜಿಲೆನ್ಸ್ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದೆ. ಪರ್ಮಿಟ್‌ನಲ್ಲಿ ತಿಳಿಸಿರುವುದಕ್ಕಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

1200 ಚದರ ಅಡಿ ವಿಸ್ತೀರ್ಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ನಿರ್ಮಿಸಿ ಬಳಿಕ 653 ಚದರ ಅಡಿ ಎಂದು ದಾಖಲೆಯಲ್ಲಿ ತೋರಿಸಿ ಪಂಚಾಯಿತಿ ಆದಾಯಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ವಿಜಿಲೆನ್ಸ್ ಆ್ಯಂಡ್ ಆ್ಯಂಟಿ ಕರೆಪ್ಶನ್ ಬ್ಯೂರೋ ಡಿವೈಎಸ್ಪಿ ಎ.ಕೆ.ವಿಶ್ವಂಭರನ್ ನಾಯರ್ ನೇತೃತ್ವದ ತಂಡ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿತು.