ಜೆಸಿಐ ಉಪ್ಪುಂದ ಸುಪ್ರೀಂ ಪದ ಪ್ರದಾನ ಸವಾರಂಭದಲ್ಲಿ ನೂತನ ಅಧ್ಯಕ್ಷ ರವಿರಾಜ್ ಪೂಜಾರಿ ಅವರಿಗೆ ನಿರ್ಗಮನ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.
ಬೈಂದೂರು: ಗ್ರಾಮೀಣ ಭಾಗದಲ್ಲಿ ಬೆಳೆದು ಬಂದ ಜೆಸಿಐ ಉಪ್ಪುಂದ ಸುಪ್ರಿಂ ಟಕ, ಸಂಟನೆ ಹಾಗೂ ಸವಾಜಮುಖಿ ಕಾರ್ಯಚಟುವಟಿಕೆಗಳ ಮೂಲಕ ವಲಯ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಊರಿನ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆಗಳಿದ್ದಾಗ ಹೊಸತನ ಪಡೆಯಲು ಸಾಧ್ಯ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಹೇಳಿದರು.
ನಾಗೂರು ಶಾಂತೇರಿ ಕಾವಾಕ್ಷಿ ಸಭಾಭವನದಲ್ಲಿ ಗುರುವಾರ ನಡೆದ ಜೆಸಿಐ ಉಪ್ಪುಂದ ಸುಪ್ರೀಂನ ಪದಪ್ರದಾನ ಸವಾರಂಭದಲ್ಲಿ ವಾತನಾಡಿದರು.
ಜೆಸಿಐ ಉಪ್ಪುಂದ ಸುಪ್ರೀಂ ಸ್ಥಾಪಕಾಧ್ಯಕ್ಷ ಮಂಜುನಾಥ ದೇವಾಡಿಗ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನಿಸಿದರು. ಈ ಸಾಲಿನ ನೂತನ ಅಧ್ಯಕ್ಷ ರವಿರಾಜ್ ಪೂಜಾರಿ ಅವರಿಗೆ ನಿರ್ಗಮನ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.
ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯ ಉಪಾಧ್ಯಕ್ಷೆ ಹರಿಣಾಕ್ಷಿ ಕರ್ಕೇರ, ಜೆಜೆಸಿ ವಿಜಯ ಶೆಟ್ಟಿ ಇದ್ದರು.
ಜೆಸಿ ಜೆಸಿಐ ಉಪ್ಪುಂದ ಸುಪ್ರೀಂ ಕಾರ್ಯದರ್ಶಿ ವೀಣಾ ಆಚಾರ್ಯ ವರದಿ ಮಂಡಿಸಿದರು. ಲೇಡಿ ಜೇಸಿ ಅಧ್ಯಕ್ಷೆ ಗೀತಾ ಶೆಟ್ಟಿ ವಂದಿಸಿದರು. ವಿಶಾಲ ಶೆಟ್ಟಿ ನಿರೂಪಿಸಿದರು.