Death 
ಉಡುಪಿ

ಗಾಯಾಳು ಕಾರ್ಮಿಕ ಸಾವು

ಇಂದಿರಾ ಎನ್ ಕೆ

ಪುತ್ತೂರು ಗ್ರಾಮಾಂತರ: ವಾರದ ಹಿಂದೆ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ಕೊಡಿಪ್ಪಾಡಿ ಗ್ರಾಮದ ಶೇರ ನಿವಾಸಿಯಾದ ಸೆಂಟ್ರಿಂಗ್ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

ಕೊಡಿಪ್ಪಾಡಿ ಗ್ರಾಮದ ಶೇರಾ ನಿವಾಸಿ ಬಾಬು ಅವರ ಪುತ್ರ ಕೃಷ್ಣಪ್ಪ(37) ಮೃತರು. ಘಟನೆಗೆ ಸಂಬಂಧಿಸಿ ಮೃತರ ಸಹೋದರ ವಸಂತ ಎಂಬುವರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.