ACCIDENT 
ಉಡುಪಿ

ಗಾಯಾಳು ಮಹಿಳೆ ಮೃತ್ಯು

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕುಂದಾಪುರ: ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಗೆ ಗ್ಯಾಸ್ ಸ್ಟೌನ ಬೆಂಕಿ ತಾಗಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಾಡಿ ಗ್ರಾಮದ ಅಕ್ಕಮ್ಮ(81) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನನೊಂದು ಯುವಕ ಆತ್ಮಹತ್ಯೆ

ಕುಂದಾಪುರ: ಕುಂದಬಾರಂದಾಡಿ ಗ್ರಾಮದ ರಾಯರಮನೆ, ಬೆಳ್ಳಿಗದ್ದೆ ನಿವಾಸಿ ಸುರೇಶ ದೇವಾಡಿಗ(40) ಎಂಬುವರು ವಿಪರೀತ ಮದ್ಯಸೇವನೆ ಚಟ ಹೊಂದಿದ್ದು, ತನಗಿರುವ ಕುಡಿತದ ಚಟ ಹಾಗೂ ಸರಿಯಾದ ಉದ್ಯೋಗವಿಲ್ಲ ಎಂಬ ಕೊರಗಿನಿಂದ ಮನೆ ಎದುರಿನ ದನದ ಕೊಟ್ಟಿಗೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ವಾಡಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.