ಮಣೂರು ಪಡುಕರೆ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಪಾಲಕರ ಮಹಾಸಭೆಯನ್ನು ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಪ್ರಮುಖರಾದ ನಾಗರಾಜ್, ರಮೇಶ್ ಕುಂದರ್, ವಿನಯ್, ವಿಜಯ ಇದ್ದರು.  
ಉಡುಪಿ

ಶೈಕ್ಷಣಿಕ ಚಟುವಟಿಕೆಯೊಂದಿಗೆ ಮೂಲಸೌಕರ್ಯ ಅಗತ್ಯ

ಇಂದಿರಾ ಎನ್ ಕೆ
ಕೋಟ: ಸುಧಾರಿತ ಶೈಕ್ಷಣಿಕ ಚಟುವಟಿಕೆಯೊಂದಿಗೆ ಭೌತಿಕ ಮೂಲಸೌಕರ್ಯ ವ್ಯವಸ್ಥೆ ಪೂರ್ಣಗೊಳಿಸುವಲ್ಲಿ ನಿರಂತರ ಪರಿಶ್ರಮ ಅಗತ್ಯ ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದರು.
ಮಣೂರು ಪಡುಕರೆ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಪಾಲಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2026-27ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ 625 ಅಂಕ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಗೀತಾನಂದ ಪೌಂಡೇಶನ್ ವತಿಯಿಂದ ಪ್ರೋತ್ಸಾಹವಾಗಿ ವಿದ್ಯಾರ್ಥಿವೇತನ ರೂಪದಲ್ಲಿ 50 ಸಾವಿರ ರೂ. ನಗದು ನೀಡುವುದಾಗಿ ಘೋಷಿಸಲಾಯಿತು.
ಪ್ರೌಢಶಾಲಾ ಮುಖ್ಯಶಿಕ್ಷಕ ವಿವೇಕಾನಂದ ವಿ.ಗಾಂವಕಾರ ಮಾತನಾಡಿದರು. ವಿಶೇಷ ಉಪನ್ಯಾಸಕರಾಗಿ ಮಾತಾ ಆಸ್ಪತ್ರೆ ಕುಂದಾಪುರ ಮನೋವೈದ್ಯೆ ಡಾ.ಜಾಹ್ನವಿ, ಪಾಲಕರಿಗೆ ಮಕ್ಕಳ ಕಲಿಕಾ ನೂನ್ಯತೆ ಸರಿಪಡಿಸುವ ಬಗ್ಗೆ ಮಾಹಿತಿ ನೀಡಿದರು.
ಪ್ರೌಢಶಾಲಾ ವಿಭಾಗ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ವಾಹಿನಿ ಯುವಕ ಮಂಡಲ ಅಧ್ಯಕ್ಷ ರಮೇಶ್ ಕುಂದರ್, ಪ್ರಾಥಮಿಕ ವಿಭಾಗ ಎಸ್‌ಡಿಎಂಸಿ ಅಧ್ಯಕ್ಷ ವಿನಯ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ವಿಜಯ, ಗೀತಾನಂದ ಪೌಂಢೇಶನ್ ಮಣೂರು ಪಡುಕರೆ ಸಂಯೋಜಕ ರವಿಕಿರಣ್ ಉಪಸ್ಥಿತರಿದ್ದರು. ರಾಮದಾಸ್ ನಾಯಕ್ ಸ್ವಾಗತಿಸಿದರು. ಲಲಿತಾ ವಂದಿಸಿದರು. ನಾಗರತ್ನ ನಿರ್ದೇಶನದಲ್ಲಿ ಶಾಲಾ ಮಕ್ಕಳ ಕಿರು ಪ್ರಹಸನ ಮತ್ತು ನೃತ್ಯ ಪ್ರದರ್ಶನಗೊಂಡಿತು. ಹೆರಿಯ ಕಾರ್ಯಕ್ರಮ ನಿರೂಪಿಸಿದರು.