ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಆಯೋಜಿಸಿದ್ದ ಶಿಕ್ಷಕ-ರಕ್ಷಕ ಸಭೆಯಲ್ಲಿ ಡಾ.ಸತೀಶ್​ ರಾವ್​ ಬಿ. ಉಪನ್ಯಾಸ ನೀಡಿದರು. ಡಾ. ವಿನಯಕುಮಾರ್​, ಡಾ. ಮಂಜುನಾಥ್​ ಕರಬ, ಡಾ. ಮಹೇಶ್​ ಭಟ್​, ಡಾ. ಆನಂದ್​ ಆಚಾರ್ಯ ಇದ್ದರು. 
ಉಡುಪಿ

ಮಕ್ಕಳಿಗೆ ತಿಳಿಸಿ ಆರೋಗ್ಯ ರಕ್ಷಣೆಯ ಮಾಹಿತಿ

* ಪಾಲಕರಿಗೆ ಡಾ.ಸತೀಶ್​ ರಾವ್​ ಬಿ. ಸಲಹೆ

* ಪೂರ್ಣಪ್ರಜ್ಞ ಕಾಲೇಜ್​ನಲ್ಲಿ ಶಿಕ್ಷಕ-ರಕ್ಷಕ ಸಭೆ

ಉಡುಪಿ: ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುವಲ್ಲಿ ಪಾಲಕರ ಪಾತ್ರ ಬಹಳ ಪ್ರಮುಖ. ಮಕ್ಕಳ ಆರೋಗ್ಯದತ್ತ ಕಾಳಜಿ ವಹಿಸಿ ತಮ್ಮ ಆರೋಗ್ಯವನ್ನೂ ಕಾಪಾಡಿಕೊಂಡು ಮನೆಯಲ್ಲಿಯೇ ಅವರಿಗೆ ಆರೋಗ್ಯ ರಕ್ಷಣೆಯ ವಿಚಾರ ತಿಳಿಸಬೇಕು. ಅದರಿಂದ ಅವರ ಭವಿಷ್ಯವೂ ಉತ್ತಮವಾಗಿರುತ್ತದೆ ಎಂದು ಪೂರ್ಣಪ್ರಜ್ಞ ಕಾಲೇಜ್​ನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಡಾ.ಸತೀಶ್​ ರಾವ್​ ಬಿ. ಸಲಹೆ ನೀಡಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ (ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಶಿಕ್ಷಕ-ರಕ್ಷಕ ಸಭೆಯಲ್ಲಿ 'ಆರೋಗ್ಯ ಸಂರಕ್ಷಣೆ' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾಲೇಜ್​ನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ವಿನಯಕುಮಾರ್​ ಮಾತನಾಡಿ, ವಿದ್ಯಾರ್ಥಿಗಳಿಗಿರುವ ಸೌಲಭ್ಯ, ಪಠ್ಯ, ಮತ್ತು ಪತ್ಯೇತರ ಚಟುವಿಕೆ, ಯೋಜನೆ, ಇತ್ತೀಚೆಗೆ ಕಾಲೇಜ್​ನಲ್ಲಾದ ಪ್ರಗತಿಗಳ ಬಗ್ಗೆ ತಿಳಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಮಂಜುನಾಥ್​ ಕರಬ ಮತ್ತು ಪರೀಕ್ಷಾಂಗ ಉಪ ನಿಯಂತ್ರಕ ಡಾ. ಮಹೇಶ್​ ಭಟ್​ ಮಾತನಾಡಿ, ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆ, ಶಿಸ್ತು ಮತ್ತು ಪರೀಕ್ಷಾ ವಿಚಾರಗಳನ್ನು ತಿಳಿಸಿದರು.

ವಿದ್ಯಾರ್ಥಿನಿಯರಾದ ನೂತನಾ, ಶ್ರಾವಣಿ ಪ್ರಾರ್ಥಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಯೋಜಕ ಡಾ. ಆನಂದ್​ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪರಿಚಯಿಸಿದರು. ಸಂಸ್ಕೃತ ಉಪನ್ಯಾಸಕ ಗುರುರಾಜ ಭಟ್​ ಕಾರ್ಯಕ್ರಮ ನಿರೂಪಿಸಿದರು. ಗಣಿತ ಉಪನ್ಯಾಸಕಿ ಶ್ರೀನಯನಾ ವಂದಿಸಿದರು.