ಬಿ.ಸಿ.ರೋಡ್‌ನ ಅಂಬೇಡ್ಕರ್ ಭವನದಲ್ಲಿ ಕ್ರಾಂತಿಕಾರಿ ಯುವಜನ ಸಂಘಟನೆ(ಆರ್.ವೈ.ಎ) ರಾಜ್ಯ ಸಮಾವೇಶ ನಡೆಯಿತು. ಕ್ಲಿಪ್ಟನ್ ಡಿ ರೊಜಾರಿಯೋ, ರವಿಕಿರಣ್ ಪುಣಚ ಮೊದಲಾದವರಿದ್ದರು.
ಬಂಟ್ವಾಳ: ಇಂದು ಭಾರತವು ಬಂಡವಾಳಶಾಹಿ ವ್ಯವಸ್ಥೆಯ ಕಾರಣದಿಂದಾಗಿ ಅಧೋಗತಿಗೆ ತಲುಪಿದ್ದು ಯುವಜನತೆ ಜಾಗೃತರಾಗಬೇಕಿದೆ ಎಂದು ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ ರೊಜಾರಿಯೋ ಹೇಳಿದರು.
ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಕ್ರಾಂತಿಕಾರಿ ಯುವಜನ ಸಂಘಟನೆ(ಆರ್.ವೈ.ಎ)ಯ ರಾಜ್ಯ ಸಮಾವೇಶ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಬದರುದ್ದೀನ್ ಎಂ.ಎನ್., ಸಿಪಿಐಎಂಎಲ್ ಲಿಬರೇಶನ್ ದ.ಕ. ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ನಮ್ಮ ಮತ ನಮ್ಮ ಹಕ್ಕು ಸಂಘಟನೆಯ ಫಾದರ್ ವಿನೋದ್, ಸಿಪಿಐಎಂಎಲ್ ಕೊಡಗು ಜಿಲ್ಲಾ ಕಾರ್ಯದರ್ಶಿ ಮೋಹನ್ ಎಂ.ಕೆ., ಎಐಸಿಸಿಟಿಯು ಗೌರವಾಧ್ಯಕ್ಷ ಮೋಹನ್ ಕೆ.ಇ., ಆಟೋ ರಿಕ್ಷಾ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಅನ್ಸಾರ್ ಬಜಾಲ್, ಐಸಾ ರಾಜ್ಯ ಮುಖಂಡರಾದ ಸತ್ಯಂ ಪಾಂಡೆ, ಹೇಮಂತ್ ಬೆಂಗಳೂರು, ಲಿಯೋನ್ ಬೆಂಗಳೂರು ಉಪಸ್ಥಿತರಿದ್ದರು.
ಮಹಮ್ಮದ್ ಲುಕ್ಮಾನ್ ಕೆ.ಎಂ. ಸ್ವಾಗತಿಸಿದರು. ತುಳಸೀದಾಸ್ ಆರ್. ಅಧ್ಯಕ್ಷತೆ ವಹಿಸಿದ್ದರು. ನೂತನ ಸಂಚಾಲಕ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ತುಳಸೀದಾಸ್ ಆರ್., ಚೆನ್ನಯ್ಯ ಬೆಂಗಳೂರು, ಸಹ ಸಂಚಾಲಕರಾಗಿ ಮಹಮ್ಮದ್ ಲುಕ್ಮಾನ್ ಕೆ.ಎಂ., ಹೇಮಂತ್ ಬೆಂಗಳೂರು, ರಮೇಶ್ ಗಂಗಾವತಿ ಹಾಗೂ ಹನ್ನೆರಡು ಜನ ಸದಸ್ಯರ ಸಮಿತಿ ರಚಿಸಲಾಯಿತು.