ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಧೀರಜ್ ಆರ್.ಶಿರೂರ್ಕರ್ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಖಜಾಂಚಿ ಚಂಪಾ ಆರ್.ಶಿರೂರ್ಕರ್, ಪ್ರಾಂಶುಪಾಲ ಡಾ.ರವಿದಾಸ್ ಶೆಟ್ಟಿ ಇದ್ದರು.
ಬೈಂದೂರು: ರಾಷ್ಟ್ರೀಯ ಭಾವೈಕ್ಯತೆಯನ್ನು ಬಿಂಬಿಸುವಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅರ್ಥಪೂರ್ಣವಾದುದು. ವಿವಿಧತೆಯಲ್ಲಿ ಏಕತೆ ಸಾರುವ ಹಲವು ಸಂಸ್ಕೃತಿಗಳ ತವರೂರು ಭಾರತ. ಸಂವಿಧಾನವೇ ಭಾರತಕ್ಕೆ ಆಧಾರವಾಗಿದ್ದು ನಾವು ಧರ್ಮ, ಮತ, ಜಾತಿ, ಭಾಷೆಗಳ ಅಂತರ ಅಳಿದು ಸಾವಾಜಿಕ ಮತ್ತು ಆರ್ಥಿಕವಾಗಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ ಅಭಿವಾನ ಬೆಳೆಸಿಕೊಂಡು ಆದರ್ಶ ಪ್ರಜೆಗಳಾಗಿ ಸಂವಿಧಾನದ ಗೌರವ ನತೆ ಎತ್ತಿ ಹಿಡಿಯುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ವಾಡಬೇಕು ಎಂದು ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆ ಕಾರ್ಯದರ್ಶಿ ಧೀರಜ್ ಆರ್.ಶಿರೂರ್ಕರ್ ಹೇಳಿದರು.
ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ವಾತನಾಡಿದರು.
ಸಂಸ್ಥೆ ಪ್ರಾಂಶುಪಾಲ ಡಾ.ರವಿದಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಚಂಪಾ ಆರ್.ಶಿರೂರ್ಕರ್ ಇದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಂಬೇಡ್ಕರ್ ಮತ್ತು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸೃಜನಿ ಸ್ವಾಗತಿಸಿದರು. ವಾನ್ವಿ ವಂದಿಸಿದರು. ಅನನ್ಯಾ ನಿರೂಪಿಸಿದರು.