ಉಡುಪಿಯ ಮೂಡು ಪೆರಂಪಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಧ ಶ್ರೀಕಾಂತ್​ ಭಟ್​ ಪೆರಂಪಳ್ಳಿ ಅವರನ್ನು ಯಶ್​ಪಾಲ್​ ಸುವರ್ಣ ಸನ್ಮಾನಿಸಿದರು. ಡೆನ್ನಿಸ್​ ಮಾಸ್ಕರೇನಸ್​, ದಿನೇಶ್​ ಅಮೀನ್​, ಉಮೇಶ್​ ನಾಯ್ಕ್​, ಶಶಾಂಕ್​ ಶಿವತ್ತಾಯ, ಕಿಶೋರ್​ ಕರಂಬಳ್ಳಿ, ಶೆರ್ಲಿನ್​ ಮಾಸ್ಕರೇನ್ಹಸ್​, ಶೇಖ್​ ಫಯಾಜ್​, ಅಬ್ದುಲ್​ ಖಾದರ್​, ಅನಿತಾ ಬೆಲಿಂಡಾ ಡಿಸೋಜಾ, ಪ್ರಿಯಾ ಮಾಸ್ಕರೇನ್ಹಸ್​ ಇತರರಿದ್ದರು. 
ಉಡುಪಿ

ದೇಶ ಕಾಯುವ ಯೋಧರಿಂದ ಭಾರತ ಸುಭದ್ರ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಮತ

* ಸೈನಿಕ ಶ್ರೀಕಾಂತ್​ ಭಟ್​ ಪೆರಂಪಳ್ಳಿಗೆ ಸನ್ಮಾನ

ಉಡುಪಿ: ಸೇನಾ ಬಲದಲ್ಲಿ ಭಾರತವೂ ಇಂದು ವಿಶ್ವದಲ್ಲಿ ಪ್ರಬಲವಾಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಸೈನ್ಯದ ಬಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕ್ಷಿಪಣಿ, ಶಸ್ತ್ರಾಸ್ತ್ರ, ಯುದ್ಧ ವಿಮಾನಗಳ ಹೊಂದುವಿಕೆಯಿಂದ ನಮ್ಮ ಸೇನೆ ಸಶಕ್ತವಾಗಿದೆ. ಸೇನಾ ಸಾಮರ್ಥ್ಯ ಹೇಗಿದೆ ಎನ್ನುವುದಕ್ಕೆ 'ಆಪರೇಷನ್​ ಸಿಂದೂರ' ಸಣ್ಣ ಉದಾಹರಣೆಯಾಗಿದೆ. ದೇಶದ ಭದ್ರತೆಯಲ್ಲಿ ನಿರತರಾದ ಯೋಧರ ಶ್ರಮದಿಂದ ಭಾರತೀಯರು ನೆಮ್ಮದಿಯಿಂದ ಇರುವಂತಾಗಿದೆ. ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಉಡುಪಿ ನಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಮೂಡು ಪೆರಂಪಳ್ಳಿಯಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಸೇವಾ ಸಂಕಲ್ಪ ಅಭಿಯಾನದ ನಿಮಿತ್ತ ದೇಶದ ಗಡಿ ಕಾಯುವ ಯೋಧ ಶ್ರೀಕಾಂತ್​ ಭಟ್​ ಪೆರಂಪಳ್ಳಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಉಡುಪಿ ನಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೆನ್ನಿಸ್​ ಮಾಸ್ಕರೇನಸ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್​ ಅಮೀನ್​, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮೇಶ್​ ನಾಯ್ಕ್​, ಜಿಲ್ಲಾ ಮಾಧ್ಯಮ ಸಂಚಾಲಕ ಶಶಾಂಕ್​ ಶಿವತ್ತಾಯ, ಉಡುಪಿ ನಗರ ಉಪಾಧ್ಯಕ್ಷ ಕಿಶೋರ್​ ಕರಂಬಳ್ಳಿ, ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶೆರ್ಲಿನ್​ ಮಾಸ್ಕರೇನ್ಹಸ್​, ಶೇಖ್​ ಫಯಾಜ್​, ಉಪಾಧ್ಯಕ್ಷ ಅಬ್ದುಲ್​ ಖಾದರ್​ ಉಪಸ್ಥಿತರಿದ್ದರು.

ಕಾರ್ಯಕಾರಿಣಿ ಸದಸ್ಯರಾದ ವಿನ್ನಿ ಡಿಸೋಜಾ, ಲಿಡಿಯ, ಸ್ಟೇನಿ ಡಿಸೋಜಾ, ಪ್ರಿಯಾ ಮಾಸ್ಕರೇನ್ಹಸ್​, ರ್ಯಾಲ್​ ಮಾಸ್ಕರೇನ್ಹಸ್​, ವಿನ್ಸೆಂಟ್​ ಡಿಸೋಜಾ, ನಗರಸಭಾ ಮಾಜಿ ಸದಸ್ಯೆ ಅನಿತಾ ಬೆಲಿಂಡಾ ಡಿಸೋಜಾ, ಪ್ರಮುಖರಾದ ಪ್ರಶಾಂತ್​ ಭಟ್​, ಶಂಕರ್​ ಕುಲಾಲ್​, ಉಲ್ಲಾಸ್​ ದೇವಾಡಿಗ ಬೂತ್​ ಅಧ್ಯಕ್ಷೆ ಲೀನಾ ಕೆ.ಎಲ್​., ಪಕ್ಷದ ಹಿರಿಯರಾದ ಬಾಲಕೃಷ್ಣ ಆಚಾರ್ಯ ಇನ್ನಿತರರು ಪಾಲ್ಗೊಂಡಿದ್ದರು.