ಚೇರ್ಕಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ರಾಷ್ಟ್ರೋತ್ಸವ ಕಾರ್ಯಕ್ರಮವನ್ನು ನಾರಾವಿ ದಿನೇಶ್ ಹೆಗ್ಡೆ ಉದ್ಘಾಟಿಸಿದರು. ವಸಂತ್ ಕುವಾರ್, ಪೂರ್ಣಿವಾ ಎಸ್.ಡಿ., ಸಾಧು ಸಾಲಿಯಾನ್ ಮತ್ತಿತರರು ಇದ್ದರು.
ಬ್ರಹ್ಮಾವರ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಶಿಕ್ಷಣದೊಂದಿಗೆ ಪಂಚ ಪರಿವರ್ತನೆಗಳಾದ ಸಾವಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆಯ ಶಿಕ್ಷಣ ನೀಡುತ್ತದೆ. ಜಗತ್ತಿಗೆ ಭಾರತ ನೀಡಿದ ಜ್ಞಾನ, ಆರೋಗ್ಯ ಸಂಸ್ಕೃತಿ ಮತ್ತು ತತ್ವ ಸಿದ್ಧಾಂತವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿಸಬೇಕು. ರಾಷ್ಟ್ರೀಯತೆ ಮತ್ತು ಸಂಸ್ಕಾರಯುತ ಶಿಕ್ಷಣ ಪಡೆದಲ್ಲಿ ವಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾರಾವಿ ದಿನೇಶ್ ಹೆಗ್ಡೆ ಹೇಳಿದರು.
ಚೇರ್ಕಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ನಡೆದ ರಾಷ್ಟ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು. ಇತ್ತೀಚೆಗೆ ಅಗಲಿದ ನಿಟ್ಟೆ ವಿವಿ ಕುಲಾಧಿಪತಿ ಡಾ.ವಿನಯ ಹೆಗ್ಡೆ ಅವರಿಗೆ ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ರಾಷ್ಟ್ರೋತ್ಥಾನ ದಕ್ಷಿಣ ವಲಯದ ಸಿಬಿಎಸ್‌ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಕರೆಸ್ಪಾಡೆಂಟ್ ವಸಂತ್ ಕುವಾರ್, ವಿದ್ಯಾಕೇಂದ್ರದ ಪ್ರಧಾನ ಆಚಾರ್ಯೆ ಪೂರ್ಣಿವಾ ಎಸ್.ಡಿ., ಉಡುಪಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್, ಕಾರ್ಯದರ್ಶಿ ರಿಷಿರಾಜ್ ಉಪಸ್ಥಿತರಿದ್ದರು.