ಸುಬ್ರಹ್ಮಣ್ಯ ಲಯನ್ಸ್ ಅಧ್ಯಕ್ಷೆ ವಿಮಲಾ ರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪ್ರೊ.ಕೆ.ರಂಗಯ್ಯ ಶೆಟ್ಟಿಗಾರ್, ನಂಜುಂಡೇಶ್ವರ ಸ್ವಾಮಿ, ಹುಲಿಕಲ್ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಸಮಾಜ ಸೇವೆಯಿಂದ ಬದುಕಿನಲ್ಲಿ ಸಂತಸ ವೃದ್ಧಿ

ಸುಬ್ರಹ್ಮಣ್ಯ: 53 ವರ್ಷ ಹಳೇ ಕ್ಲಬ್ ಮತ್ತು 4 ವರ್ಷ ಕ್ಲಬ್‌ಗಳ ಸಮಾಗಮ ಒಂದು ಐತಿಹಾಸಿ ಕ್ಷಣ. ಸಮಾಜಮುಖಿ ಸೇವೆಗೆ ಮುಡಿಪಾಸಿಕೊಂಡು ಜನತೆಯ ಸೇವೆ ಮಾಡುವುದು ಲಯನ್ಸ್ ಧ್ಯೇಯ. ಇದನ್ನು 5 ದಶಕಗಳಿಂದ ಮಾಡುತ್ತಿರುವ ದೊಡ್ಡ ಬಳ್ಳಾಪುರ ಕ್ಲಬ್ ಮಾದರಿಯಾಗಿದೆ. ತೆರೆಮರೆಯ ಕಾಯಿಯಂತೆ ಸಮಾಜದ ಜನರ ಹಿತಕ್ಕಾಗಿ ಸೇವೆ ಸಲ್ಲಿಸುವುದು ಸದಾ ಹರ್ಷ ತರುತ್ತದೆ ಎಂದು ಲಯ್ಸ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಪ್ರೊ.ರಂಗಯ್ಯ ಶೆಟ್ಟಿಗಾರ್ ಹೇಳಿದರು.
ಸುಬ್ರಹ್ಮಣ್ಯ ಗ್ರಾ.ಪಂ.ಸಭಾಂಗಣದಲ್ಲಿ ಸೋಮವಾರ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರದ ಸ್ನೇಹ ಸಮ್ಮಿಲನ ಟ್ವಿನ್ನಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೊಡ್ಡ ಬಳ್ಳಾಪುರ ಲಯನ್ಸ್ ಅಧ್ಯಕ್ಷ ಎಸ್.ವಿ.ನಂಜುಡೇಶ್ವರ ಸ್ವಾಮಿ, ಕಾರ್ಯದರ್ಶಿ ಹುಲಿಕಲ್ ನಟರಾಜ್, ಕೋಶಾಧಿಕಾರಿ ಎನ್.ಜಗದೀಶ್, ಕ್ಲಬ್‌ನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಲಯನ್ಸ್ ಜಿಲ್ಲಾಧ್ಯಕ್ಷ ಎಂ.ಸಿ.ವೆಂಕಟೇಶ್, ಜಿಲ್ಲಾ ಪದಾಧಿಕಾರಿಗಳಾದ ಆರ್.ಎಸ್.ಮಂಜುನಾಥ್, ಸಿ.ಎಸ್.ರಾಜಶೇಖರ್, ಕೋಶಾಧಿಕಾರಿ ಭಾರತಿ ದಿನೇಶ್, ಲಯನ್ಸ್ ಪದಾಧಿಕಾರಿಗಳಾದ ಮೋಹನ್‌ದಾಸ್ ರೈ, ಪ್ರಕಾಶ್ ಶೆಟ್ಟಿ, ದಿನೇಶ್ ಮೊಗ್ರ, ದಿನೇಶ್ ಎಂ.ಪಿ.ಉಪಸ್ಥಿತರಿದ್ದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರೊ.ಕೆ.ರಂಗಯ್ಯ ಶೆಟ್ಟಿಗಾರ್, ಸುಬ್ರಹ್ಮಣ್ಯ ಲಯನ್ಸ್ ಅಧ್ಯಕ್ಷೆ ವಿಮಲಾ ರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಕ್ಲಬ್‌ನ ಸದಸ್ಯರನ್ನು ಗೌರವಿಸಲಾಯಿತು.