ಪಡುಬಿದ್ರಿ ಎಸ್​ ಇ ಝಡ್​ ಮುಖ್ಯಸ್ಥ ಅಶೋಕ್​ ಶೆಟ್ಟಿ ಉದ್ಗಾಟಿಸಿದರು.  
ಉಡುಪಿ

ಕಲೆ, ಸಾಹಿತ್ಯದಿಂದ ಸಹನಾಶೀಲ ಸಮಾಜ ನಿರ್ಮಾಣ: ಹರಿಪ್ರಸಾದ್​ ರೈ

ಉಡುಪಿ: ಅಗಲವಾದ ರಸ್ತೆ, ಕಟ್ಟಡ, ಮಾಲ್​ಗಳ ಸಹಿತ ಜಿಲ್ಲೆ ಬೆಳೆದಿದೆ. ಆದರೆ, ಜಿಲ್ಲೆಯ ಅಸ್ಮಿತೆ, ಅಸ್ತಿತ್ವಕ್ಕೆ ಇದಷ್ಟೇ ಸಾಲುವುದಿಲ್ಲ. ಕಲೆ, ಸಾಹಿತ್ಯ, ಸಂಸತಿಯೂ ಅಗತ್ಯ. ಅಭಿವೃದ್ಧಿ ಮತ್ತು ಸಂಸತಿ ಒಟ್ಟಿಗೆ ಸಾಗಿದರೆ ಮಾತ್ರ ಸಹನಾಶೀಲ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿ ಅಧ್ಯಕ್ಷ ಹರಿಪ್ರಸಾದ್​ ರೈ ವಿಶ್ಲೇಷಿಸಿದರು.
 ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಟನೆ ಸುಮನಸಾ ಕೊಡವೂರು ಸಂಸ್ಥೆ ರಜತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಕಾಲೇಜಿನಲ್ಲಿ ವಿದ್ಯೆ ಮಾತ್ರ ದೊರೆಯಬಹುದು.ವೃತ್ತಿ ಜೀವನದಲ್ಲಿ ಸಂಪರ್ಕ ಕೌಶಲ, ನಾಯಕತ್ವ, ನಿರ್ವಹಣಾ ಕೌಶಲ ಬೇಕಾದರೆ ರಂಗಚಟುವಟಿಕೆ ಅಗತ್ಯ ಎಂದು ಪ್ರತಿಪಾದಿಸಿದರು.
ಕಪ್ಪೆ ಚಿಪ್ಪಿನೊಳಗಿನಿಂದ ಮುತ್ತು ಹೊರ ಬರುವ ಮಾದರಿ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪಡುಬಿದ್ರಿ ಎಸ್​ ಇ ಝಡ್​ ಮುಖ್ಯಸ್ಥ ಅಶೋಕ್​ ಶೆಟ್ಟಿ ಮಾತನಾಡಿ,  ಅನೇಕ ಸಂಘ ಸಂಸ್ಥೆಗಳು ಹುಟ್ಟುತ್ತವೆ. ಆರಂಭದಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತವೆ. ಮೂರ್ನಾಲ್ಕು ವರ್ಷಕ್ಕೆ ಹುಮ್ಮಸ್ಸು ಕಳೆದುಕೊಂಡು ಮುಚ್ಚಿ ಹೋಗುತ್ತವೆ. ಸುಮನಸಾ ಕೊಡವೂರು ಸಂಘಟನೆಯು 25 ವರ್ಷದಿಂದ ಸಾಂಸತಿಕ ಕೆಲಸ ಮಾಡುತ್ತಿರುವುದು ಶ್ಲಾನೀಯ ಎಂದು ಹೇಳಿದರು.
 ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ರಜತ ಮಹೋತ್ಸವದ ಕೈಪಿಡಿ ಬಿಡುಗಡೆ ಮಾಡಿದರು.  ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್​ ಕುಮಾರ್​ ಮಾತನಾಡಿದರು. ಬುಡ್ನಾರು ಯಕ್ಷ ಸಂಜೀವ ಟ್ರಸ್ಟ್​ನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಲೋಗೊ ಬಿಡುಗಡೆ ಮಾಡಿದರು.ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಎಂ.ಎಲ್​. ಸಾಮಗ, ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ ಪಾಲನ್​ ಬಾಚನಬೈಲು ಉಪಸ್ಥಿತರಿದ್ದರು. ಸಂಘಟನೆ ಅಧ್ಯಕ್ಷ ಪ್ರಕಾಶ್​ ಜಿ. ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್​. ಭಟ್​ ವಂದಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು. ಬಳಿಕ ಅಟ್ಟಮಟ್ಟಾ ಬೇಸಿಗೆ ಶಿಬಿರ ವಿದ್ಯಾರ್ಥಿಗಳಿಂದ ಎರಡು ನಾಟಕ ಪ್ರದರ್ಶನಗೊಂಡಿತು.