ಹೆಬ್ರಿ ತಾಲೂಕಿನ ಶಿವಪುರ ಎಲಿಕೋಡು ಮಠದಲ್ಲಿ ಶಿಲಾಮಯ ಗರ್ಭಗೃಹ ಸಮರ್ಪಣೆ ನಾಗಬ್ರಹ್ಮ ಪರಿವಾರ ದೇವರ ಪ್ರತಿಷ್ಠಾಪನೆ ಮತ್ತು ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರ ಬ್ರಹ್ಮಕಲಶಾಭಿಷೇಕ ಭಾನುವಾರ ನಡೆಯಿತು. 
ಉಡುಪಿ

ಶಿಲಾಮಯ ಗರ್ಭಗೃಹ ಸಮರ್ಪಣೆ

ಪ್ರಮುಖ ಮುಖ್ಯಾಂಶಗಳು

  • ಶಿವಪುರ ಎಲಿಕೋಡು ಮಠದಲ್ಲಿ ಬ್ರಹ್ಮಕಲಶಾಭಿಷೇಕ
  • ಕೃಷ್ಣಾಪುರ ಶ್ರೀಗಳಿಗೆ ಪೂಜೆ
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಶಿವಪುರ ಎಲಿಕೋಡು ಮಠದಲ್ಲಿ ಶಿಲಾಮಯ ಗರ್ಭಗೃಹ ಸಮರ್ಪಣೆ, ಸಪರಿವಾರ ನಾಗಬ್ರಹ್ಮ ಪರಿವಾರ ದೇವರ ಪ್ರತಿಷ್ಠಾಪನೆ ಮತ್ತು ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರ ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.

ಕೃಷ್ಣಾಪುರ ಶ್ರೀಗಳಿಗೆ ಪೂಜೆ

ಉಡುಪಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಪೂಜೆ ನೆರವೇರಿಸಿ, ಅನುಗ್ರಹ ಮಂತ್ರಾಕ್ಷತೆ ನೀಡಿದರು. ಅರ್ಚಕ ವಾಸುದೇವಾ ಭಟ್​ ಶಿವಪುರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಮಹಾಪ್ರಸಾದ ನೀಡಿ ಗೌರವಾರ್ಪಣೆ

ಸರ್ತಿ ವ್ಯವಸ್ಥಾಪಕರಾದ ಶ್ರೀನಿವಾಸ ಎಲಿಕೋಡು, ಬೈಕಾಡಿ ಮಂಜುನಾಥ ರಾವ್​ ಎಲಿಕೋಡು ಶಿವಪುರ, ಭೋಜ ಶೆಟ್ಟಿ ಎಲಿಕೋಡು ಮತ್ತು ಎಲಿಕೋಡು ಪ್ರದೇಶದ ಪ್ರಮುಖರಿಗೆ ಕ್ಷೇತ್ರದ ಮಹಾಪ್ರಸಾದ ನೀಡಿ ಗೌರವಿಸಲಾಯಿತು. ಎಲಿಕೋಡು ಮತ್ತು ಶಿವಪುರದ ಪ್ರಮುಖರು, ಎಲಿಕೋಡು ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಎಲಿಕೋಡು ಮನೆತನದವರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.
ಎಲಿಕೋಡು ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ ಎಲಿಕೋಡು, ಪ್ರಮುಖರಾದ ಶ್ರೀನಾಥ್​ ಎಲಿಕೋಡು, ಶಂಕರನಾರಾಯಣ ಕೊಡಂಚ, ಡಾ.ಗುರುಪ್ರಸಾದ ಕೊಡಂಚ, ರಾಧಮ್ಮ ಎಲಿಕೋಡು, ಪ್ರಮುಖರಾದ ಚಂದು ನಾಯ್ಕ್​, ರಮೇಶ ನಾಯ್ಕ್​, ಪಾಂಡು ನಾಯ್ಕ್​, ಹರೀಶ ನಾಯ್ಕ್​, ಸಂತೋಷ್​ ನಾಯ್ಕ್​, ಪ್ರದೀಪ ನಾಯ್ಕ್​ ಮತ್ತಿತರರು ಉಪಸ್ಥಿತರಿದ್ದರು. ನಿತ್ಯಾನಂದ ಶೆಟ್ಟಿ ವಂದಿಸಿದರು.