ಉಡುಪಿ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ನವೀಕರಿಸಿದ ಕೇಂದ್ರ ಗ್ರಂಥಾಲಯವನ್ನು ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಡಿ. ಸುರೇಂದ್ರ ಕುಮಾರ್, ಡಾ. ನಿರಂಜನ್ ಕುಮಾರ್, ಡಿ. ಶ್ರೇಯಸ್ಕುಮಾರ್, ನಿಶ್ಚಲ್ಕುಮಾರ್ ಡಿ. ಇತರರಿದ್ದರು.
* ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜಿನಲ್ಲಿ ಕಾರ್ಯಕ್ರಮ
ಉಡುಪಿ: ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ನವೀಕರಿಸಿದ ಕೇಂದ್ರ ಗ್ರಂಥಾಲಯ ಮತ್ತು ಮೂರು ವಿಭಾಗಗಳ ಉದ್ಘಾಟನಾ ಸಮಾರಂಭ ನೆರವೇರಿತು.
ಕೇಂದ್ರ ಗ್ರಂಥಾಲಯ ಮತ್ತು ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗವನ್ನು ಎಸ್ಡಿಎಂ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ರಸಶಾಸ್ತ್ರ ಹಾಗೂ ಬೈಷಜ್ಯ ಕಲ್ಪನ ವಿಭಾಗ, ದ್ರವ್ಯಗುಣ ವಿಭಾಗವನ್ನು ಎಸ್ಡಿಎಂ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಧಾರವಾಡ ಎಸ್ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ಕುಮಾರ್ ಉದ್ಘಾಟಿಸಿದರು.
ನವೀಕೃತ ವಿಭಾಗವು ಆಧುನಿಕ ಪ್ರಯೋಗಾಲಯ, ವಿಕೃತಿ ವಿಜ್ಞಾನ ಸಂಗ್ರಹಾಲಯ, ಔಷಧ ದ್ರವ್ಯ ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕ, ಔಷಧ ಉಪಯೋಗೀ ಸಸ್ಯಗಳ ಸಂಗ್ರಹ ಹೊಂದಿದೆ.
ಎಸ್ಡಿಎಂ ಎಜುಕೇಷನಲ್ ಸೊಸೈಟಿಯ ನಿರ್ದೇಶಕ ಡಿ. ಶ್ರೇಯಸ್ಕುಮಾರ್, ನಿರ್ದೇಶಕ (ಹಣಕಾಸು) ನಿಶ್ಚಲ್ಕುಮಾರ್ ಡಿ., ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ಮತ್ತು ಹಾಸ್ಟೆಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರನ್ ವರ್ಮ, ಎಸ್ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಡಾ. ಪ್ರಸನ್ನ ನರಸಿಂಹ ರಾವ್, ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗಾರಾಜ್ ಎಸ್. ಉಪಸ್ಥಿತರಿದ್ದರು. ಧಾರವಾಡದ ಎಸ್ಡಿಎಂ ವಿಶ್ವವಿದ್ಯಾಲಯ ಹಾಗೂ ವಿವಿಧ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.