ಉಡುಪಿಯಲ್ಲಿ 'ವಿಕೆ ಫರ್ನಿಚರ್​ ಆ್ಯಂಡ್​ ಇಲೆಕ್ಟ್ರಾನಿಕ್ಸ್​'ನ ಮಳಿಗೆಯ ಕಾರ್ಯಾರಂಭವನ್ನು ಯಶ್​ಪಾಲ್​ ಸುವರ್ಣ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ವಿಠ್ಠಲ್​ ಕುಲಾಲ್​, ವಿನುತಾ ಕುಲಾಲ್​, ಸತೀಶ್​ ಕುಂಪಲ, ಮನೋಹರ್​ ಶೆಟ್ಟಿ, ಅಜಯ್​ ಪಿ.ಶೆಟ್ಟಿ, ಹಾರ್ದಿಕ್​ ವಿ.ಕೆ., ಮನಿಷ್ಕ್​ ವಿ.ಕೆ. ಇದ್ದರು. 
ಉಡುಪಿ

'ವಿಕೆ' ಅಂದರೆ ಗೆಲುವು-ಭವಿಷ್ಯ, ವಿಶ್ವಾಸಾರ್ಹ ಸಂಸ್ಥೆ

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ

* ಉಡುಪಿಯಲ್ಲಿ ಫರ್ನಿಚರ್​ ಆ್ಯಂಡ್​ ಇಲೆಕ್ಟ್ರಾನಿಕ್ಸ್​ ಮಳಿಗೆ ಉದ್ಘಾಟನೆ 

ಉಡುಪಿ: ಇಂದಿನ ಯುವ ಸಮುದಾಯಕ್ಕೆ ನಿರೀಕ್ಷೆಯಂತೆ ಸರ್ಕಾರಿ ಉದ್ಯೋಗ ಕೊಡುವ ಸ್ಥಿಯಲ್ಲಿ ಸರ್ಕಾರಗಳಿಲ್ಲ. ಹೀಗಾಗಿ ಖಾಸಗಿ ಉದ್ಯಮಗಳೇ ಆಧಾರವಾಗಿದೆ. ಆ ನಿಟ್ಟಿನಲ್ಲಿ ವಿಕೆ ಫರ್ನಿಚರ್​ ಆ್ಯಂಡ್​ ಇಲೆಕ್ಟ್ರಾನಿಕ್ಸ್​ ಸಂಸ್ಥೆಯು ಯುವತಿಯರಿಗೆ ಆಸರೆಯಾಗಿದೆ. ಶ್ರಮ ಪಟ್ಟರೆ ಯಶಸ್ಸು ಖಂಡಿತ ಎನ್ನುವುದಕ್ಕೆ ವಿಕೆ ಸಂಸ್ಥೆಯ ಪ್ರವರ್ತಕ ವಿಠ್ಠಲ್​ ಕುಲಾಲ್​ ಅವರೇ ಪ್ರೇರಣೆ. 'ವಿಕೆ' ಅಂದರೆ ಗೆಲುವು-ಭವಿಷ್ಯ, ವಿಶ್ವಾಸಾರ್ಹ ಸಂಸ್ಥೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಉಡುಪಿ ಕುಂಜಿಬೆಟ್ಟು ಕಡಿಯಾಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ನಿರ್ಮಾಣಗೊಂಡ ದಕ್ಷಿಣ ಕನ್ನಡದಲ್ಲಿ ಫರ್ನಿಚರ್​ ಮತ್ತು ಇಲೆಕ್ಟ್ರಾನಿಕ್ಸ್​ ಕ್ಷೇತ್ರದಲ್ಲಿ ಮನೆಮಾತಾಗಿರುವ 'ವಿಕೆ ಫರ್ನಿಚರ್​ ಆ್ಯಂಡ್​ ಇಲೆಕ್ಟ್ರಾನಿಕ್ಸ್​'ನ ನೂತನ ಹಾಗೂ ವಿಸ್ತೃತ 6ನೇ ಮಳಿಗೆಯನ್ನು ಶನಿವಾರ (ಜು.4) ಉದ್ಘಾಟಿಸಿ ಮಾತನಾಡಿದರು.
ಉಡುಪಿಯಲ್ಲಿ ಆರಂಭಗೊಂಡ 'ವಿಕೆ ಫರ್ನಿಚರ್​ ಆ್ಯಂಡ್​ ಇಲೆಕ್ಟ್ರಾನಿಕ್ಸ್​'ನ ನೂತನ ಮಳಿಗೆಯನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಯಶ್​ಪಾಲ್​ ಸುವರ್ಣ, ವಿಠ್ಠಲ್​ ಕುಲಾಲ್​, ವಿನುತಾ ವಿಠ್ಠಲ್​ ಕುಲಾಲ್ ಇತರರಿದ್ದರು.
ಶ್ರೀಕೃಷ್ಣನ ಅನುಗ್ರಹ ಇರಲಿ
ಶ್ರಮಪಡುವವರಿಗೆ ದೇವರು ಹೆಚ್ಚಿನ ಶಕ್ತಿ ಕೊಡುತ್ತಾನೆ. ಉಡುಪಿಯ ಅಭಿವೃದ್ಧಿಗೆ ಹೊಸ ಸ್ಪರ್ಶ ನೀಡಲಿರುವ ವಿಕೆ ಫರ್ನಿಚರ್​ ಮಳಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ರಾಜ್ಯ-ದೇಶ ಮಟ್ಟದಲ್ಲಿ ಖ್ಯಾತಿ ಗಳಿಸಲಿ. ಅವರ ಉದ್ಯಮ ಇನ್ನಷ್ಟು ಬೆಳೆಯುವಂತೆ ಉಡುಪಿ ಶ್ರೀಕೃಷ್ಣನ ಅನುಗ್ರಹ ಸದಾ ಇರಲಿ ಎಂದು ಹಾರೈಸಿದರು.

ಉಡುಪಿಗೆ ಮತ್ತೊಂದು ಗರಿ 

ಶಾಸಕ ಯಶಪಾಲ್​ ಸುವರ್ಣ ಮಾತನಾಡಿ, ಉಡುಪಿ-ಮಣಿಪಾಲ ಅವಳಿ ನಗರ ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿದೆ. ಅಗಲ ಕಿರಿದಾದ ರಸ್ತೆ ಹೊಂದಿದ್ದ ಉಡುಪಿ ನಗರದ ಚಹರೆ ದಿ. ಡಾ. ವಿ.ಎಸ್​. ಆಚಾರ್ಯರ ಅಭಿವೃದ್ಧಿಯ ಕನಸಿನ ಫಲವಾಗಿ ಬದಲಾಗಿದೆ. ಇಂತಹ ಉಡುಪಿಯಲ್ಲಿ ವಿಕೆ ಫರ್ನಿಚರ್​ ಆ್ಯಂಡ್​ ಇಲೆಕ್ಟ್ರಾನಿಕ್ಸ್​ ಮಳಿಗೆ ಆರಂಭಗೊಂಡಿದ್ದು ಗ್ರಾಹಕರಿಗೆ ಅನುಕೂಲ ಆಗಲಿದೆ. ಉಡುಪಿಯ ಮುಕುಟಕ್ಕೆ ವಿಕೆ ಸಂಸ್ಥೆಯೂ ಇದೀಗ ಮತ್ತೊಂದು ಗರಿಯಾಗಿ ಸೇರಿದೆ. ಉಡುಪಿಯ ಸಮಗ್ರ ಅಭಿವೃದ್ಧಿಗೆ ವಿಠ್ಠಲ್​ ಕುಲಾಲ್​ ಅವರ ತಂಡ ಕೈಜೋಡಿಸಲಿ ಎಂದು ಆಶಿಸಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್​ ಕುಂಪಲ ಮಾತನಾಡಿದರು. ಉಜ್ವಲ್​ ಡೆವಲಪರ್ಸ್​ ಸಂಸ್ಥೆಯ ಅಜಯ್​ ಪಿ.ಶೆಟ್ಟಿ, ಉದ್ಯಮಿ ಕೆ.ಎಂ. ಶೆಟ್ಟಿ, ಅಲೆಕ್ಸಿಸ್​ ಕ್ಯಾಸ್ಟಲಿನೋ, ವಿಕೆ ಸಂಸ್ಥೆಯ ಪ್ರವರ್ತಕರಾದ ವಿಠ್ಠಲ್​ ಕುಲಾಲ್​ ಹಾಗೂ ವಿನುತಾ ವಿಠ್ಠಲ್​ ಕುಲಾಲ್​, ಪುತ್ರರಾದ ಹಾರ್ದಿಕ್​ ವಿ.ಕೆ., ಮನಿಷ್ಕ್​ ವಿ.ಕೆ. ಉಪಸ್ಥಿತರಿದ್ದರು.
ಕಟ್ಟಡದ ಮಾಲೀಕ ಕಲ್ಯಾಣ್​ಸಿಂಗ್​ ಕೊಜರಂ ಅವರನ್ನು ಸನ್ಮಾನಿಸಲಾಯಿತು. ಚೇತನ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
"

ಅರಬ್ಬಿ ಸಮುದ್ರ, ಪಶ್ಚಿಮ ಘಟ್ಟದಿಂದಾಗಿ ಭೂಪ್ರದೇಶ ಕಡಿಮೆ ಇರುವ ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆಯ ವಿಸ್ತರಣೆ ಸುಲಭವಲ್ಲ. ಪ್ರವಾಸೋದ್ಯಮಕ್ಕೆ ಉಜ್ವಲ ಅವಕಾಶವಿದೆ. ಪರಿಸರ ಸ್ನೇಹಿ ಉದ್ಯೋಗ ಲಭಿಸುವಂತಾಗಲು ಐಟಿ ಪಾರ್ಕ್​ಗೆ ಅವಕಾಶ ನೀಡಬೇಕು. ಜಿಲ್ಲೆಯು ಆರೋಗ್ಯ, ಶೈಕ್ಷಣಿಕ ಹಾಗೂ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದೆ. ನಾವು ಉದ್ಯಮದಲ್ಲಿ ಗಳಿಸಿದ ಹಣಕ್ಕಿಂತ ಎಷ್ಟು ಮಂದಿಗೆ ಉದ್ಯೋಗ ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ವಿಕೆ ಸಂಸ್ಥೆಯು ಅನೇಕರ ಜೀವನ ನಿರ್ವಹಣೆಗೆ ಆಸರೆಯಾಗಿದೆ.

— ಮನೋಹರ್​ ಶೆಟ್ಟಿ. ಸಾಯಿರಾಧಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ.
ಲೇಡಿಹಿಲ್​ನಿಂದ ಪೊಡವಿಗೊಡೆಯನ ನಾಡಿಗೆ 
ವಿಕೆ ಫರ್ನಿಚರ್​ ಆ್ಯಂಡ್​ ಇಲೆಕ್ಟ್ರಾನಿಕ್ಸ್​ ಸಂಸ್ಥೆಯು ಮಂಗಳೂರಿನ ಲೇಡಿ ಹಿಲ್​ನಲ್ಲಿ 2015ರಲ್ಲಿ ಆರಂಭಗೊಂಡಿದ್ದು, ಮಂಗಳೂರಿನಲ್ಲಿಯೇ 5 ಶಾಖೆಗಳಿವೆ. ಇದೀಗ ಪೊಡವಿಗೊಡೆಯನಾದ ಶ್ರೀಕೃಷ್ಣನ ನಾಡಿನಲ್ಲಿ ತನ್ನ 6ನೇ ಶಾಖೆ ಆರಂಭಿಸಿದ್ದು, 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಉಡುಪಿಯ ಮಳಿಗೆಯು 25 ಸಾವಿರ ಚದರ್​ ಅಡಿ ವಿಸ್ತೀರ್ಣ ಹೊಂದಿದೆ. ನೆಲಮಹಡಿಯಲ್ಲಿ ಸೋಫಾ ಮತ್ತು ಅಲಂಕಾರಿಕ ಸಾಮಗ್ರಿ, ಎಲ್​ಜಿ ಕಂಪನಿಯ ಇಲೆಕ್ಟ್ರಾನಿಕ್ಸ್​ ಉತ್ಪನ್ನಗಳು, ಮೊದಲ ಮಹಡಿಯಲ್ಲಿ  ಇಲೆಕ್ಟ್ರಾನಿಕ್ಸ್​ ಮಲ್ಟಿ ಬ್ರ್ಯಾಂಡ್​ ಉತ್ಪನ್ನ, ಕಿಚನ್​ ವೇರ್​, ಎರಡನೇ ಮಹಡಿಯಲ್ಲಿ  ಬೆಡ್​ ರೂಂ ವಿಭಾಗ, ಆಫೀಸ್​ ಫರ್ನಿಚರ್​, ಡೈನಿಂಗ್​ ಸೆಟ್​ ಹಾಗೂ ಮೂರನೇ ಮಹಡಿಯಲ್ಲಿ   ಒಳಾಂಣ, ಹೊರಾಂಗಣಕ್ಕೆ ಅಗತ್ಯವಿರುವ ವಿವಿಧ ಪ್ರಕಾರಗಳ ಫರ್ನಿಚರ್​ಗಳು ಲಭ್ಯವಿದೆ.

'ವಿಸಿಟ್​ ವಿನ್​' ಕಾಶ್ಮೀರಕ್ಕೆ ಉಚಿತ ಪ್ರವಾಸ ಭಾಗ್ಯ

ಕರಾವಳಿ ಭಾಗದ ಜನರಿಗೆ 15 ವರ್ಷದಿಂದ ಫರ್ನಿರ್ಸ್​ ಮತ್ತು ಇಲೆಕ್ಟ್ರಾನಿಕ್ಸ್​ ಪರಿಕರ ಒದಗಿಸುತ್ತಿರುವ ಸಂಸ್ಥೆಯು ಸ್ವಾತಂತ್ರ್ಯೋತ್ಸವ, ನವರಾತ್ರಿ, ಪ್ರಜಾಪ್ರಭುತ್ವದ ದಿನ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ. ಉಡುಪಿಯಲ್ಲಿ ನೂತನ ಶಾಖೆ ಉದ್ಘಾಟನೆಯ ನಿಮಿತ್ತ 'ವಿಸಿಟ್​ ವಿನ್​' ಅಭಿಯಾನ ಆಯೋಜಿಸಿದ್ದು, ಮಳಿಗೆಗೆ ಭೇಟಿ ನೀಡುವವರಿಗೂ ಸಹ ಕನಸಿನ ತಾಣ ಕಾಶ್ಮೀರ ಪ್ರವಾಸ ಗೆಲ್ಲುವ ಸುವರ್ಣಾವಕಾಶ ಒದಗಿಸಲಾಗಿದೆ. ಒಂದೇ ಸೂರಿನಡಿ ವಿವಿಧ ಉತ್ಪನ್ನ, ಮನೆ ಹಾಗೂ ಕಚೇರಿಗಾಗಿ ಗುಣಮಟ್ಟದ ಫರ್ನಿಚರ್​, ಹೋಮ್​ ಮತ್ತು ಆಫೀಸ್​ ಇಂಟೀರಿಯರ್ಸ್​, ಡೆಕೋರೇಟಿವ್​ ಹಾಗೂ ಫರ್ನಿಶಿಂಗ್​ ಉತ್ಪನ್ನ, ಟೆಲಿವಿಷನ್​, ಗೃಹೋಪಯೋಗಿ ವಿದ್ಯುತ್​ ಉಪಕರಣ, ವಿವಿಧ ಕಂಪನಿಗಳ ಮೊಬೈಲ್​, ಲ್ಯಾಪ್​ಟಾಪ್​ಗಳು ಹಾಗೂ ಕಿಚನ್​ವೇರ್​ ಸೇರಿದಂತೆ ಎಲ್ಲವೂ ಲಭಿಸಲಿದೆ. ಮನೆ ಹಾಗೂ ಸಂಸ್ಥೆಗಳಿಗೆ ಬೇಕಾಗುವ ದೊಡ್ಡ ಪ್ರಮಾಣದ ಸಗಟು ಬೇಡಿಕೆಯನ್ನೂ ಸಹ ಅತಿ ಕಡಿಮೆ ಅವಧಿಯಲ್ಲಿ ಸರಬರಾಜು ಮಾಡಲು ತಯಾರಿಕಾ ಘಟಕವನ್ನೂ ಹೊಂದಿದ್ದೇವೆ ಎಂದು ತಿಳಿಸಿದರು ವಿಕೆ ಸಂಸ್ಥೆಯ ಪ್ರವರ್ತಕ ವಿಠ್ಠಲ್​ ಕುಲಾಲ್​.