ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಾನ್ವಿತಾ ಕೊಠಾರಿ ಅವರಿಗೆ ಮನೆ ಹಸ್ತಾಂತರಿಸಲಾಯಿತು. ಕಿರಣಕುಮಾರ್ ಕೊಡ್ಗಿ, ಮೀರಾ ರಾಮಮೂರ್ತಿ ಭಟ್ಟ, ಮನು ಭಾರದ್ವಾಜ್, ಡಾ. ಪೂರ್ಣಶ್ರೀ, ಎ. ಶಂಕರ ಐತಾಳ್, ಸಖಾರಾಮ್ ಸೋಮಯಾಜಿ, ವಿಶ್ವನಾಥ್ ಶೆಣೈ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಎಂ. ಗಂಗಾಧರ್ ರಾವ್, ಮುರಳಿ ಕಡೆಕಾರ್ ಇತರರಿದ್ದರು.
* ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಶ್ಲಾಘನೆ
* ವಿದ್ಯಾಪೋಷಕ್ನ 97ನೇ ಮನೆ ಹಸ್ತಾಂತರ
ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗದವರು ಯಾವ ಆಡಂಬರ, ದುಂದು ವೆಚ್ಚ ಮಾಡದೆ, ಪ್ರಚಾರ ಅಪೇಕ್ಷಿಸದೆ ಮಾಡುತ್ತಿರುವ ಸಮಾಜಪರ ಕೆಲಸ ಮಾದರಿಯಾಗಿದೆ. ನನಗಂತೂ ಅವರ ಕಾರ್ಯ ಬಹಳ ಇಷ್ಟವಾಗುತ್ತದೆ. ಅವರ ಅಭಿಮಾನಿಯಾಗಿ ಬಂದು ನಾನೂ ಸಹ ಆನಂದ ಅನುಭವಿಸುತ್ತೇನೆ ಎಂದು ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಶ್ಲಾಘಿಸಿದರು.
ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಕುಂದಾಪುರ ತಾಲೂಕಿನ ಅಮಾಸೆಬೈಲು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾನ್ವಿತಾ ಕೊಠಾರಿ (ಶೋಭಾ ಮತ್ತು ಸುರೇಶ್ ಕೊಠಾರಿ ಪುತ್ರಿ) ಇವಳಿಗೆ ಅಮಾಸೆಬೈಲಿನಲ್ಲಿ ಉಡುಪಿ ಅಂಬಲಪಾಡಿಯ ಮೀರಾ ರಾಮಮೂರ್ತಿ ಭಟ್ಟ ಮತ್ತು ಮಕ್ಕಳು ರಾಮಮೂರ್ತಿ ಭಟ್ಟ ಸ್ಮರಣಾರ್ಥ ನಿರ್ಮಿಸಿದ 'ರಾಮಮೂರ್ತಿ' ಮನೆಯನ್ನು ಗುರುವಾರ (ಮೇ 28) ಉದ್ಘಾಟಿಸಿ ಮಾತನಾಡಿದರು.
ಮನೆಯೊಳಗೆ ಜ್ಯೋತಿ ಬೆಳಗಿಸಿ ಮಾತನಾಡಿದ ಪ್ರಾಯೋಜಕರಾದ ಮೀರಾ ರಾಮಮೂರ್ತಿ ಭಟ್ಟ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ದಾಸರ ಕೀರ್ತನೆಯ ಸಾರದಂತೆ ಇದು ನಾನು ಕೊಟ್ಟಿದ್ದಲ್ಲ. ಭಗವಂತ ನನಗೆ ನೀಡಿದ್ದರಲ್ಲಿ ಒಂದಶ ದಾನ ಮಾಡಿದ್ದೇನೆ ಅಷ್ಟೇ. ಯಕ್ಷಗಾನ ಕಲಾರಂಗದವರು ಎಲ್ಲ ಕಷ್ಟ ತೆಗೆದುಕೊಂಡು ಬಡ ಹುಡುಗಿಯ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ನನಗೊಂದು ಅವಕಾಶ ಕಲ್ಪಿಸಿದ್ದರಿಂದ ಅವರಿಗೆ ಕೃತಜ್ಞಳಾಗಿದ್ದೇನೆ. ಸಾನ್ವಿತಾಳಿಗೆ ಒಳಿತಾಗಲಿ ಎಂದರು.
ರಾಮಮೂರ್ತಿ ಅವರ ಮಕ್ಕಳಾದ ಮನು ಭಾರದ್ವಾಜ್, ಡಾ. ಪೂರ್ಣಶ್ರೀ ಮಾತನಾಡಿದರು.
ಕೋಟೇಶ್ವರ ಗೀತಾ ಎಚ್ಎಸ್ಎನ್ ಫೌಂಡೇಷನ್ನ ಅಧ್ಯಕ್ಷ ಎ. ಶಂಕರ ಐತಾಳ್, ಶಿಕ್ಷಣಪ್ರೇಮಿ ಸಖಾರಾಮ್ ಸೋಮಯಾಜಿ, ಸಹನಾ ಭಾರದ್ವಾಜ್, ಮೂಕಾಂಬಿಕಾ ವಾರಂಬಳ್ಳಿ, ನಿರಂಜನ ಬಲ್ಲಾಳ್, ಲಲಿತಾ ಬಲ್ಲಾಳ್, ಯಶೋದಾ ನಾಗೇಶನ್, ಶ್ಯಾಮಲಾ ಪ್ರಸಾದ್, ದೇವಕಿ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಪ್ರೊ. ಕೆ.ಸದಾಶಿವ ರಾವ್, ವಿದ್ಯಾಪ್ರಸಾದ್, ಯು. ವಿಶ್ವನಾಥ್ ಶೆಣೈ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ಡಾ. ರಾಜೇಶ್ ನಾವುಡ, ಹಿರಿಯಣ್ಣ ಕಿದಿಯೂರು, ಕೆ. ಅಜಿತಕುಮಾರ್, ಡಾ. ಪ್ರತಿಮಾ ಜೆ. ಆಚಾರ್ಯ, ಜಯರಾಮ ಪಡಿಯಾರ್, ವಿನೋದಾ ಎಂ., ಡಾ. ಶ್ರೀಕಾಂತ್ ಸಿದ್ಧಾಪುರ, ವಿಶ್ವನಾಥ್ ಶೆಟ್ಟಿ, ಕೃಷ್ಣ ಪೂಜಾರಿ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.