ಉಡುಪಿಯ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಿಂಚನಾ ನಾಯ್ಕ್ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಚಂದ್ರಶೇಖರ್ ಶೆಟ್ಟಿ ಉದ್ಘಾಟಿಸಿದರು. ಯೋಗಿಶ್ಚಂದ್ರಧರ್, ಎಂ. ಗೋಪಾಲ್ ಭಟ್, ಪಾಂಡುರಂಗ ಆಚಾರ್, ಹರಿಪ್ರಸಾದ್ ಶೆಟ್ಟಿ, ಯು. ವಿಶ್ವನಾಥ್ ಶೆಣೈ, ಎಂ.ಗಂಗಾಧರ ರಾವ್, ಶ್ರೀಲಕ್ಷ್ಮೀ ಜಿ. ಭಟ್, ಸುರೇಖಾ ಪಿ. ಆಚಾರ್ಯ, ಪದ್ಮಿನಿ ಹರಿಪ್ರಸಾದ್ ಶೆಟ್ಟಿ, ಶಿಲ್ಪಾ ಶಶಿಧರ್, ಭುವನಪ್ರಸಾದ್ ಹೆಗ್ಡೆ, ಮುರಳಿ ಕಡೆಕಾರ್ ಇತರರಿದ್ದರು.
* ಉದ್ಯಮಿ ಚಂದ್ರಶೇಖರ್ ಶೆಟ್ಟಿ ಅನಿಸಿಕೆ
* ವಿದ್ಯಾಪೋಷಕ್ನ 95ನೇ ಮನೆ ಉದ್ಘಾಟನೆ
ಉಡುಪಿ: ಯಕ್ಷಗಾನ ಕಲಾರಂಗವು ಸಮಾಜದಲ್ಲಿ ನೊಂದವರಿಗೆ ಸ್ಪಂದಿಸುವ ರೀತಿ ಎಲ್ಲ ಸಂಸ್ಥೆಗಳಿಗೂ ಮಾದರಿಯಾಗಿದೆ. ಅವರ ವಿದ್ಯಾಪೋಷಕ್ನ ಫಲಾನುಭವಿಗಳ ಆಯ್ಕೆಯಾಗಿ ವಿದ್ಯಾರ್ಥಿಗಳ ಮನೆ ಭೇಟಿ ಮಾಡುವುದು ಅವರ ಆಯ್ಕೆ ಪ್ರಕ್ರಿಯೆಯ ಪಾರದರ್ಶಕತ್ವದ ಪ್ರತಿಕವಾಗಿದೆ. ಕತ್ತಲೆಯ ಹಾದಿಯಲ್ಲಿ ನಡೆಯಬಹುದು. ಆದರೆ, ಕನಸಿಲ್ಲದ ಹಾದಿಯಲ್ಲಿ ನಡೆಯಲಾಗದು ಎಂದು ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ, ಉದ್ಯಮಿ ಹಾಗೂ ಶಿಕ್ಷಣ ಪ್ರೇಮಿ ಕೆರಾಡಿ ಚಂದ್ರಶೇಖರ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಶ್ಯಾಮಲಾ ಮತ್ತು ಚಂದ್ರ ನಾಯ್ಕ್ ಅವರ ಪುತ್ರಿ ಸಿಂಚನಾಳಿಗೆ ಕುಂದಾಪುರ ತಾಲೂಕಿನ ಕೆರಾಡಿಯಲ್ಲಿ ಉಡುಪಿಯ ಸಾಮಾಜಿಕ ಕಳಕಳಿಯ ಐವರು ಮಿತ್ರರ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ಹಾಗೂ ಯೋಜನೆಯ 95ನೇ ಮನೆ 'ಪಂಚಮ್' ಉದ್ಘಾಟಿಸಿ ಮಾತನಾಡಿದರು.
ಮನೆಯ ಪ್ರಾಯೋಜಕತ್ವ ವಹಿಸಿದ್ದ ಎ.ಜಿ. ಅಸೋಸಿಯೇಟ್ಸ್ನ ಆರ್ಕಿಟೆಕ್ಟ್ ಯೋಗಿಶ್ಚಂದ್ರಧರ್, ಇಂಜಿನಿಯರ್ ಎಂ. ಗೋಪಾಲ್ ಭಟ್, ಸ್ಪ್ಯಾನ್ ಅಸೋಸಿಯೇಟ್ಸ್ನ ಇಂಜಿನಿಯರ್ ಪಾಂಡುರಂಗ ಆಚಾರ್, ಪದ್ಮಶ್ರೀ ಕನ್ಸ್ಟ್ರಕ್ಷನ್ಸ್ನ ಇಂಜಿನಿಯರ್ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗಬಾರದು. ಸಾಧನೆಯ ಮೂಲಕ ಸಮಾಜದಲ್ಲಿ ಪ್ರತಿಷ್ಠೆಯ ಸ್ಥಾನ ಗಳಿಸಿದವರು ಅನೇಕರು ಇದ್ದಾರೆ. ವಿದ್ಯಾಪೋಷಕ್ನಂತಹ ಸಂಸ್ಥೆ ಇರುವಾಗ ಅಳುಕಬೇಕಿಲ್ಲ. ಚೆನ್ನಾಗಿ ಓದಿ, ಮುಂದೆ ನೀನೂ ಸಹ ದಾನಿಯಾಗು ಎಂದು ಸಿಂಚನಾಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಹಿರಿಯ ಸದಸ್ಯರಾದ ಯು. ವಿಶ್ವನಾಥ್ ಶೆಣೈ, ಇಂಜಿನಿಯರ್ಗಳಾದ ವಿನಯಕುಮಾರ್, ನಿರಂಜನ್ ಹಾಗೂ ಮಲ್ಲಿಕಾ ಯೋಗೀಶ್ಧರ್, ಶ್ರೀಲಕ್ಷ್ಮೀ ಜಿ. ಭಟ್, ಸುರೇಖಾ ಪಿ. ಆಚಾರ್ಯ, ಪದ್ಮಿನಿ ಹರಿಪ್ರಸಾದ್ ಶೆಟ್ಟಿ, ಶಿಲ್ಪಾ ಶಶಿಧರ್, ಗಿರೀಶ್ ಚಂದ್ರಾಧರ್, ದಿವ್ಯಾ ಗಿರೀಶ್ಧರ್, ರಕ್ಷಣ್ ಆಚಾರ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ಕೃಷ್ಣಮೂರ್ತಿ ಭಟ್, ಜಯರಾಮ್ ಪಡಿಯಾರ್, ವಿನೋದಾ ಎಂ., ಡಾ. ಪ್ರತಿಮಾ ಆಚಾರ್ಯ, ಸುದರ್ಶನ್ ಬಾಯರಿ, ವಿಶ್ವನಾಥ, ಮಾಲತಿ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.