ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಿದ್ದ 'ಪೂರ್ಣಂ" ಕಾರ್ಯಕ್ರಮವನ್ನು ಸ್ವಪ್ನಾ ಸುರೇಶ್ ಉದ್ಘಾಟಿಸಿದರು. ಡಾ. ಚಂದ್ರಕಾಂತ್ ಭಟ್, ಟಿ. ಪ್ರಶಾಂತ್ ಹೊಳ್ಳ, ಡಾ. ರಾಘವೇಂದ್ರ ಎಲ್., ವಿನಾಯಕ ಪೈ. ಬಿ., ಡಾ. ಪ್ರಜ್ಞಾ ಮಾರ್ಪಳ್ಳಿ, ಗಗನ್ ಸುವರ್ಣ, ವಿವೇಕ್ ಕೆ.ಎಂ., ಶ್ರೇಯಸ್ ನಾಯಕ್ ಉಪಸ್ಥಿತರಿದ್ದರು.
* ಜಿಲ್ಲಾ ಲಯನ್ಸ್ ಗವರ್ನರ್ ಸ್ವಪ್ನಾ ಸುರೇಶ್ ಆಶಯ
* ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ 'ಪೂರ್ಣಂ' ಉದ್ಘಾಟನೆ
ಉಡುಪಿ: ಕಾಲೇಜುಗಳಲ್ಲಿ ಆಯೋಜಿಸುವ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿರುವ ಆತ್ಮವಿಶ್ವಾಸ ಹೆಚ್ಚಿಸುವುದಲ್ಲದೆ, ಅವರಿಗೆ ತಮ್ಮೊಳಗಿನ ಶಕ್ತಿ ಅರಿತುಕೊಳ್ಳುವಂತೆ ಮಾಡುವ ಬಹುದೊಡ್ಡ ಅವಕಾಶ. ಇಂಥ ಸಂದರ್ಭಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಭೆ ಅನಾವರದ ಮೂಲಕ ಮುಂದಿನ ಬದುಕನ್ನು ಸುಂದರ, ಸ್ಮರಣೀಯವನ್ನಾಗಿಸಿಕಳ್ಳಬೇಕು ಎಂದು ಉಡುಪಿ ಜಿಲ್ಲಾ ಲಯನ್ಸ್ 317ಸಿ ವಿಭಾಗದ ಗವರ್ನರ್ ಲ. ಸ್ವಪ್ನಾ ಸುರೇಶ್ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಮಂಗಳವಾರ (ಮ.10) ಆಯೋಜಿಸಿದ್ದ 'ಪೂರ್ಣಂ-2026' ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ. ಪ್ರಶಾಂತ್ ಹೊಳ್ಳ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್., ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ವಿನಾಯಕ ಪೈ. ಬಿ., ಡಾ. ಪ್ರಜ್ಞಾ ಮಾರ್ಪಳ್ಳಿ, ಪೂರ್ಣಂನ ವಿದ್ಯಾರ್ಥಿ ಸಂಯೋಜಕರಾದ ವಿವೇಕ್ ಕೆ.ಎಂ., ಶ್ರೇಯಸ್ ನಾಯಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕ ಗಗನ್ ಸುವರ್ಣ ಸ್ವಾಗತಿಸಿದರು. ಪೂರ್ಣಂನ ವಿದ್ಯಾರ್ಥಿ ಸಂಯೋಜಕಕಿ ಅವನಿ ಆಚಾರ್ಯ ವಂದಿಸಿದರು. ರಾನಿಯಾ ಕಾರ್ಯಕ್ರಮ ನಿರೂಪಿಸಿದರು.