ಉಡುಪಿಯ ವಿದ್ಯೋದಯ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ್ದ ಚದುರಂಗ ಸ್ಪರ್ಧೆಯನ್ನು ಎನ್​. ನಾಗರಾಜ್​ ಬಲ್ಲಾಳ್​ ಉದ್ಘಾಟಿಸಿದರು. ಸುಕೇಶ್​ ಶೆಟ್ಟಿ, ದಿನೇಶ್​ ಶೆಟ್ಟಿ, ಸಂದೀಪ್​ ಕುಮಾರ್​, ವೀರೇಂದ್ರ ಶೆಟ್ಟಿಗಾರ್​, ರಂಜನಾ ಕೆ. ಇದ್ದರು. 
ಉಡುಪಿ

ಚದುರಂಗ ಆಟದಿಂದ ಯೋಚನಾ ಶಕ್ತಿ ವೃದ್ಧಿ

* ಎನ್​. ನಾಗರಾಜ್​ ಬಲ್ಲಾಳ್​ ಅನಿಸಿಕೆ

* ವಿದ್ಯೋದಯ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ಉದ್ಘಾಟನೆ

ಉಡುಪಿ: ಚದುರಂಗವು ಯೋಜನಾ ಬದ್ಧವಾಗಿ ಆಡುವ ಆಟವಾಗಿದೆ. ಮುಂದಿನ ನಡೆಯ ಬಗ್ಗೆ ಮುಂಚೆಯೇ ಕಲ್ಪನೆ ಮಾಡಿಕೊಂಡು ಆಡುವ ವಿಶಿಷ್ಟ ಕ್ರೀಡೆ ಇದಾಗಿದೆ. ಈ ಪಂದ್ಯಾಟವು ವಿದ್ಯಾರ್ಥಿಗಳಲ್ಲಿ ಯೋಚನಾ ಶಕ್ತಿ ವೃದ್ಧಿಸುತ್ತದೆ. ಅವರ ಸ್ಮರಣ ಸಾಮರ್ಥ್ಯವೂ ಹೆಚ್ಚಳವಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್​. ನಾಗರಾಜ್​ ಬಲ್ಲಾಳ್​ ತಿಳಿಸಿದರು.
ಉಡುಪಿಯ ವಿದ್ಯೋದಯ ಟ್ರಸ್ಟ್​ (ರಿ.)ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ (ಆ.22) ಆಯೋಜಿಸಿದ್ದ ಶಾಲಾ ಶಿಕ್ಷಣ ಇಲಾಖೆಯ (ಪ.ಪೂ.) ವಿಭಾಗದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಕೇಶ್​ ಶೆಟ್ಟಿ, ಜಿಲ್ಲಾ ಕ್ರೀಡಾ ಮೇಲ್ವಿಚಾರಕ ದಿನೇಶ್​ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲೆ ರಂಜನಾ ಕೆ. ಉಪಸ್ಥಿತರಿದ್ದರು.

ಉಪನ್ಯಾಸಕ ಶಿವಪ್ರಸಾದ್​ ಭಟ್​ ವಂದಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ವೀರೇಂದ್ರ ಶೆಟ್ಟಿಗಾರ್​ ಚೆಸ್​ ಪಂದ್ಯಾಟ ಸಂಯೋಜಿಸಿದ್ದರು.

ಉಡುಪಿ ಜಿಲ್ಲೆಯ 45 ಕಾಲೇಜಿನ 238 ವಿದ್ಯಾರ್ಥಿಗಳು ಭಾಗವಹಿಸಿದ್ದರು.