ಶಾಸಕಿ ಭಾಗೀರಥಿ ಮುರುಳ್ಯ ರಸ್ತೆ ಉದ್ಘಾಟಿಸಿದರು. ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಸುಳ್ಯ ಶಾಸಕರ ವಿಶೇಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ಗುತ್ತಿಗಾರು ಗ್ರಾಮದ ಬಾಕಿಲ-ಪೈಕ ರಸ್ತೆ, ಬಾಳುಗೋಡು ಗ್ರಾಮದ ಬಾಳುಗೋಡು ಬೈಲು ರಸ್ತೆ ಹಾಗೂ ಪದಕ- ಕುಡುಮುಂಡೂರು ರಸ್ತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಶನಿವಾರ ಉದ್ಘಾಟಿಸಿದರು.
ಬಳಿಕ ಶಾಸಕರು ಬಾಳುಗೊಡು ಗ್ರಾಮದ ಪಕ್ಷದ ಹಿರಿಯ ಕಾರ್ಯಕರ್ತ ನವಿನ್ ಕೆದಿಲ ಅವರ ಮನೆಗೆ ತೆರಳಿ ಪಕ್ಷದ ವತಿಯಿಂದ ಗೌರವಿಸಿದರು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಪ್ರಮುಖರಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ವಿನಯ್ ಕುಮಾರ್, ರಾಕೇಶ್, ಪ್ರಮುಖರಾದ ಪದ್ಮಯ್ಯ ಮಾಸ್ತರ್ ಕಟ್ಟೆಮನೆ, ಸೀತಾರಾಮ ಮಾಸ್ತರ್ ಕಟ್ಟೆಮನೆ, ದೇವಪ್ರಸಾದ್ ಕಜೆ ಗದ್ದೆ , ಶಶಿಧರ್, ಡಾ.ಸೋಮಶೇಖರ್ ಕಟ್ಟೆಮನೆ, ಜಯಂತ ಬಾಳುಗೋಡು, ವಿಜಯ ಅಂಗಣ, ರಾಧಾಕೃಷ್ಣ, ಡ್ಯಾನಿ ಯಲದಾಳು, ಅಜೇಯ, ವಾಸುದೇವ ಕಿರಿಭಾಗ, ನವೀನ್ ಕೆದಿಲ, ಜಗದೀಶ ಇದ್ದರು. ಚಂದ್ರಹಾಸ ಶಿವಾಲ ಸ್ವಾಗತಿಸಿ, ವಂದಿಸಿದರು.