ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ. 
ಉಡುಪಿ

ಡೇವಿಡ್ ಹತ್ಯೆ ಪ್ರಕರಣ, ಪ್ರಮುಖ ಆರೋಪಿಗಳಿಬ್ಬರ ಬಂಧನ

ನ್ಯಾಯಾಲಯಕ್ಕೆ ಹಾಜರುಪಡಿಸಿದ ತನಿಖಾಧಿಕಾರಿಗಳು

ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರು

ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಡೇವಿಡ್‌ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳಾದ ಭೂಗತ ಪಾತಕಿ ಹೇಮಂತ್ ಪೂಜಾರಿಯ ಸಹೋದರ ಕಿಶೋರ್ ಪೂಜಾರಿ (ಕೆಪಿ) ಹಾಗೂ ಸದಾನಂದ ಕುತ್ಯಾರ್‌ ಎಂಬವರನ್ನು ಬಂಧಿಸಿರುವ ಪೊಲೀಸರು, ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಶುಕ್ರವಾರ (ಆ.14) ಹಾಜರುಪಡಿಸಿದರು.
ಶಿರ್ವ ಠಾಣೆಯ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಹಾಜರುಪಡಿಸಿದ್ದು, 
ಆಗಸ್ಟ್ 10ರಂದು ನಮ್ಮನ್ನು ಬಂಧಿಸಲಾಗಿದೆ ಎಂದು ಆರೋಪಿಗಳು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಧೀಶ ಎಂ.ಪುರುಷೋತ್ತಮ್ ಅವರು
ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು.
 ಆರೋಪಿ ಕಿಶೋರ್ ಪೂಜಾರಿ ಪರ ವಕೀಲರು, ನಮ್ಮ ಕಕ್ಷಿದಾರನಿಗೆ ಅನಾರೋಗ್ಯವಿದೆ ಎಂದು ಹೇಳಿದರು. ಅಲ್ಲದೆ, ಪೊಲೀಸರು ಮನೆಯ ಸಿಸಿಟಿವಿ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ನ್ಯಾಯಾಧೀಶರು, ತನಿಖೆಗೆ ಬೇಕಿದ್ದಲ್ಲಿ ಪೊಲೀಸ್ ಕಸ್ಟಡಿಗೆ ಕೇಳಬಹುದಿತ್ತು. ಯಾಕೆ ಹೀಗಾಯಿತು ಎಂದು ಪ್ರಶ್ನಿಸಿದರು. ಅಲ್ಲದೆ, ತನಿಖಾಧಿಕಾರಿಗಳಿಗೆ ಈ ಕುರಿತು ವಿವರಣೆ ನೀಡಲು ಮೌಖಿಕವಾಗಿ ಸೂಚಿಸಿದರು ಎಂದು ತಿಳಿದು ಬಂದಿದೆ.