ಬೈಂದೂರು ತಾಲೂಕು ಆಡಳಿತ ಕಚೇರಿ ಎದುರು ಕಲ್ಪಿತ ಶವ ಇಟ್ಟು ರೈತರು ಪ್ರತಿಭಟಿಸಿದರು. ಪ್ರಮುಖರಾದ ದೀಪಕ್ ಕುವಾರ ಶೆಟ್ಟಿ, ಡಾ.ಸುಬ್ರಹ್ಮಣ್ಯ ಭಟ್, ಗಣೇಶ ಪೂಜಾರಿ, ಪದ್ಮಾಕ್ಷ, ದೇವಪ್ಪ ಮರಾಠಿ ಮೊದಲಾದವರಿದ್ದರು.  
ಉಡುಪಿ

ಆ.3ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

ಇಂದಿರಾ ಎನ್ ಕೆ
ಬೈಂದೂರು: ಮುನ್ನೂರು ದಿನಗಳಿಂದ ರೈತರು ಬದುಕಿಗಾಗಿ, ಊರಿನ ಕಾಳಜಿಗಾಗಿ ಕೆಲಸ ಕಾರ್ಯ ಬಿಟ್ಟು ಧರಣಿ ನಡೆಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಚಿವರು ಮನಸ್ಸು ವಾಡಿದರೆ ಶೀಘ್ರ ನ್ಯಾಯ ನೀಡಬಹುದು.
ಆದರೆ ಬೈಂದೂರಿನಲ್ಲಿ ಜನಪ್ರತಿನಿಧಿಗಳು ರೈತರ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆ.3ರಿಂದ ಸಾವಿರಾರು ರೈತರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ತಾಲೂಕು ರೈತ ಸಂ ಅಧ್ಯಕ್ಷ ದೀಪಕ್ ಕುವಾರ ಶೆಟ್ಟಿ ತಿಳಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದರು.
ಡಾ.ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಬೈಂದೂರು ಪಟ್ಟಣ ಪಂಚಾಯಿತಿ ಎದುರು ಕಲ್ಪಿತ ಶವ ಇಟ್ಟು ಮೆರವಣಿಗೆ ಮೂಲಕ ತಾಲೂಕು ಆಡಳಿತ ಕಚೇರಿಗೆ ತರಲಾಯಿತು.
ಈ ಸಂದರ್ಭ ಯುವ ರೈತರ ಟಕದ ಅಧ್ಯಕ್ಷರಾಗಿ ಆಕಾಶ ಪೂಜಾರಿ ಎಳಜಿತ್ ಅವರನ್ನು ನೇಮಕ ಮಾಡಲಾಯಿತು. ಪ್ರಮುಖರಾದ ಗಣೇಶ ಪೂಜಾರಿ, ಪದ್ಮಾಕ್ಷ, ದೇವಪ್ಪ ಮರಾಠಿ, ಸುಭಾಶ್ ಗಂಗಾನಾಡು, ವಾಸು ಮರಾಠಿ, ಹೊಸೂರು ಕೃಷ್ಣ ದೇವಾಡಿಗ, ಕೇಶವ ಪೂಜಾರಿ, ರೈತ ಮುಖಂಡ ಅರುಣ್ ಕುವಾರ ಶಿರೂರು, ವೀರಭದ್ರ ಗಾಣಿಗ ಮತ್ತಿತರರಿದ್ದರು.