crime 
ಉಡುಪಿ

ಕೆಂಪುಕಲ್ಲು ಅಕ್ರಮ ಸಾಗಾಟ, ಲಾರಿ ವಶ

ಇಂದಿರಾ ಎನ್ ಕೆ
ಉಪ್ಪಿನಂಗಡಿ: ಕೆಂಪು ಕಲ್ಲು ಅಕ್ರಮ ಸಾಗಾಟದ ಪ್ರಕರಣವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಗಸ್ತು ನಿರತರಾಗಿದ್ದಾಗ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ತಡೆದಿದ್ದು, ಸ್ವಲ್ಪ ದೂರ ಹೋಗಿ ಲಾರಿಯನ್ನು ನಿಲ್ಲಿಸಿದ ಲಾರಿ ಚಾಲಕ ಲಾರಿಯ ಕೀ ಹಾಗೂ ದಾಖಲೆಪತ್ರದೊಂದಿಗೆ ಪರಾರಿಯಾಗಿದ್ದ.
ಬಳಿಕ ಪೊಲೀಸರು ಪರಿಶೀಲಿಸಿದಾಗ ಕೆಂಪು ಕಲ್ಲನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು 10 ಸಾವಿರ ರೂ. ಮೌಲ್ಯದ 250 ಕೆಂಪು ಕಲ್ಲು ಹಾಗೂ 12 ಲಕ್ಷ ರೂ. ಮೌಲ್ಯದ ಲಾರಿ ಸ್ವಾಧೀನಪಡಿಸಿಕೊಂಡಿದ್ದಾರೆ.