crime 
ಉಡುಪಿ

ಕುಮಾರಧಾರಾ ನದಿಯಿಂದ ಅಕ್ರಮ ಮರಳು ಕಳ್ಳತನ

ಕಡಬ: ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ, ದೇವಸ್ಥಾನದ ಆವರಣದಲ್ಲಿ ದಾಸ್ತಾನು ಇಟ್ಟಿದ್ದ ಚಾರ್ವಾಕ ಗ್ರಾಮದ ಕುಂಬ್ಲಾಡಿ ನಿವಾಸಿ, ಶ್ರೀ ಕುಕ್ಕೆನಾಥ ಬಾಲ ಸುಬ್ರಹ್ಮಣ್ಯ ದೇವಸ್ಥಾನದ ಸಮಿತಿ ಅಧ್ಯಕ್ಷ ಗಣೇಶ್(40) ಎಂಬುವರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಡಬ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ನೇತೃತ್ವದಲ್ಲಿ ದಾಳಿ ನಡೆದಿದೆ. ದೇವಸ್ಥಾನದ ರಿಪೇರಿ ಕೆಲಸಕ್ಕಾಗಿ ಹತ್ತಿರದಲ್ಲೇ ಹರಿಯುವ ಕುಮಾರಧಾರ ನದಿಯಿಂದ ಕೆಲವು ದಿನಗಳ ಹಿಂದೆ ಮರಳನ್ನು ತಂದು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಕಾನೂನು ಬಾಹಿರ ಮರಳು ದಾಸ್ತಾನು ಹಾಗೂ ಕಳ್ಳತನದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.