ಉಡುಪಿ ಪೊಲೀಸರು ವಶಪಡಿಸಿಕೊಂಡ ಅಕ್ರಮ ಮದ್ಯ ಹಾಗೂ ಬಂಧಿತ ಕಂಟ್ಯಪ್ಪ ಮೇಥಿ. 
ಉಡುಪಿ

ಮದ್ಯ ಅಕ್ರಮ ಮಾರಾಟ; ಓರ್ವನ ಬಂಧನ

* ಬಾಗಲಕೋಟೆ ಮೂಲದ ಕಂಟ್ಯಪ್ಪ ಮೇಥಿ ವಶಕ್ಕೆ

ಉಡುಪಿ: ಉಡುಪಿಯ ಹಳೆಯ ಬಸ್​ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಶನಿವಾರ (ಜು.4) ನಸುಕಿನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಬಾಗಲಕೋಟೆ ಮೂಲದ ಕಂಟ್ಯಪ್ಪ ಮೇಥಿ (32) ಬಂಧಿತ.
ಖಚಿತ ಮಾಹಿತಿಯ ಮೇರೆಗೆ ಉಡುಪಿ ನಗರ ಪೊಲೀಸ್​ ಠಾಣೆಯ ನಿರೀಕ್ಷಕ ಮಹೇಶ್​ ಪ್ರಸಾದ್​, ಉಪನಿರೀಕ್ಷಕ ಭರತೇಶ್​ ನೇತೃತ್ವದಲ್ಲಿ ಮುಖ್ಯ ಆರಕ್ಷಕ ಬಶೀರ್​ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.
ಬೈಕ್​ನಲ್ಲಿ ಬಂದಿದ್ದ ಕಂಟ್ಯಪ್ಪ, ಸಿಟಿ ಬಸ್​ ನಿಲ್ದಾಣದಲ್ಲಿ ಮದ್ಯದ ಪೊಟ್ಟಣ (ಟೆಟ್ರಾ ಪ್ಯಾಕ್​) ಮಾರಾಟ ಮಾಡುತ್ತಿದ್ದನು. ಪೊಲೀಸರು ಆತನನ್ನು ವಶಕ್ಕೆ ಪಡೆದು, ಆತನ ಬೈಕ್​ ತಪಾಸಣೆ ನಡೆಸಿದಾಗ 4 ಲೀಟರ್​ನಷ್ಟು ಮದ್ಯ ಪತ್ತೆಯಾಗಿದೆ.
ಕಾರ್ಯಾಚರಣೆಗೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಉಡುಪಿ ನಗರ ಪೊಲೀಸ್​ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದೆ.