ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ.ಪ್ರತಾಪಸಿಂಹ ನಾಯಕ್, ಸುಭಾಶ್ಚಂದ್ರ ಶೆಟ್ಟಿ, ಗಂಗಾಧರ್, ಪ್ರಜ್ವಲ್ ಕೆ.ರೈ ಇತರರು ಇದ್ದರು.  
ಉಡುಪಿ

ಮನಸ್ಸು ಹಿಡಿತದಲ್ಲಿಟ್ಟು ಓದಿದರೆ ಯಶಸ್ಸು ನಿಶ್ಚಿತ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪ್ರತಿಯೊಬ್ಬರಲ್ಲೂ ಅದ್ಭುತ ದೈವಿ ಶಕ್ತಿಯಿದೆ. ಅದನ್ನ ಗುರುತಿಸಿ ಪ್ರಕಟಿಸುವುದೇ ಶಿಕ್ಷಣದ ಮೂಲ ಉದ್ದೇಶ. ವಿದ್ಯಾರ್ಥಿಗಳು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಶ್ರದ್ಧೆ, ಪರಿಶ್ರಮದಿಂದ ಓದಿದಾಗ ಯಶಸ್ಸು ನಿಶ್ಚಿತ. ಪಾಲಕರ ಆಶೀರ್ವಾದ, ಶಿಕ್ಷಕರ ವಾರ್ಗದರ್ಶನದೊಂದಿಗೆ ವೈಯಕ್ತಿಕ ಪರಿಶ್ರಮವೂ ಅತ್ಯಗತ್ಯ ಎಂದು ಎಂದು ವಿಧಾನ ಪರಿಷತ್ ವಾಜಿ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಹೇಳಿದರು.
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ವತಿಯಿಂದ ಗುರುವಾಯನಕೆರೆ ಬಂಟರ ಭವನದಲ್ಲಿ ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸವಾರಂಭ ಉದ್ಘಾಟಿಸಿ ವಾತನಾಡಿದರು.

ವಿದ್ವತ್ ಪಿಯು ಕಾಲೇಜು ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ವಾತನಾಡಿ, ವಿದ್ಯಾಸಂಸ್ಥೆಗಳು ವ್ಯವಹಾರ ಕ್ಷೇತ್ರವಾಗದೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಭವ್ಯ ಕೇಂದ್ರವಾಗಿ ಬೆಳೆಯಬೇಕು. ಪಿಯುಸಿ ಬದುಕಿನ ಅಮೂಲ್ಯ ಎರಡು ವಷರ್ಗಳಾಗಿದ್ದು, ಒಂದು ಕ್ಷಣವೂ ಸಮಯ ವ್ಯರ್ಥ ವಾಡದೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ್ ವಾತನಾಡಿದರು. ಪಾಲಕರ ಪರವಾಗಿ ಚಿನ್ಮಯ್ ಜಿ.ಕೆ. ಅವರ ತಂದೆ ಗಣೇಶ್ ಭಟ್ ಹಾಗೂ ಪ್ರತೀಕ್ ವಿ.ಎಸ್. ತಂದೆ ವಸಂತ್ ಶೆಟ್ಟಿ ಅಭಿಪ್ರಾಯ ಹಂಚಿಕೊಂಡರು.

ಕೆ.ಪ್ರತಾಪಸಿಂಹ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ಕೆ.ರೈ, ಖಜಾಂಚಿ ಕಾಶೀನಾಥ ಎಂ.ಕೆ., ಟ್ರಸ್ಟಿ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲ ಬಾಲಕೃಷ್ಣ ನಾಯಕ್, ವಿಭಾಗ ಮುಖ್ಯಸ್ಥ ಅನಿಲ್ ಸುಸ್ರಾಪು, ಎಸ್.ಎನ್.ಭಟ್, ಡಾ.ಮಹಿತಾ, ವಿನೋದ್ ಎಸ್.ಇ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸನ್ನಿಧಿ ಎ.ಎಚ್. ಸ್ವಾಗತಿಸಿದರು. ಕಾಶ್ವಿ ಪಿ.ದಿನೇಶ್ ವಂದಿಸಿದರು. ಪ್ರತಿಜ್ಞಾ ನಿರೂಪಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ನೀಟ್, ಜೆಇಇ, ಸಿಇಟಿ ಸಹಿತ ಬೋರ್ಡ್ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಚಿನ್ಮಯ್ ಜಿ.ಕೆ., ಸಂಪತ್ ಕುವಾರ್ ಪುಟ್ಟಿ, ತನುಶ್ರೀ, ಪ್ರತೀಕ್ ವಿ.ಎಸ್., ಅಜಿತ್ ಎಚ್.ಸಿ., ಮನೀಶ್ ಡಿ., ರಾಹುಲ್ ಸ್ವಾಮಿ, ರಿತೇಶ್, ಪ್ರಥಮ್ ಆರ್.ಗೋಖಲೆ, ರಾಹುಲ್ ಜಿ.ಎಸ್., ರಿಶಾಂತ್ ವೈ.ಪಿ., ಸೃಷ್ಟಿ ಎಸ್., ನೇಹಾ ಭಟ್, ಧ್ಯಾನ ಎಸ್.ಆಶ್ಲೇಷ್ ಹಾಗೂ ಅವರ ಪಾಲಕರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಅತ್ಯಧಿಕ ಅಂಕ ಗಳಿಸಿದವರಿಗೆ ಗೌರವ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ನೀಟ್‌ನಲ್ಲಿ ಅತ್ಯಧಿಕ ಅಂಕ ಪಡೆದ ಮೋಕ್ಷಾ ಎಸ್., ಇಶಿತಾ ಕೆ.ಪ್ರಕಾಶ್, ಎಸ್.ಯಮುನಾ ಸಿರಿ ಹೊಳ್ಳ. ಜಿಇಇನಲ್ಲಿ ಇಂದುಶ್ರೀ, ಸಹಿಷ್ಣು ಎನ್., ಪ್ರತೀತ್ ಎ.ಬಿ., ಸಿಇಟಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಡಿಯೋನಾ ಕ್ಲೆರಾ ರೋಡ್ರಿಗಸ್, ವಾಯಾಂಕ್ ಪಿ. ಹಾಗೂ ಕಳೆದ ಸಾಲಿನ ದ್ವಿತೀಯ ಪಿಯುಸಿಯ 13 ಮಂದಿ ವಿಶೇಷ ಸಾಧಕರನ್ನು ಗೌರವಿಸಲಾಯಿತು.