ಕೋಟ ವಿದ್ಯಾಸಂಘ, ಕೋಟ ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ವೈದ್ಯ ಡಾ.ಶ್ರೀಪತಿ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.
ಕೋಟ: ಶೈಕ್ಷಣಿಕ ಕ್ಷೇತ್ರದಲ್ಲಿ ವಿವೇಕ ವಿದ್ಯಾಸಂಸ್ಥೆಯು ಶ್ರೇಷ್ಠ ವಿದ್ಯಾದೇಗುಲವಾಗಿದೆ. ಇಲ್ಲಿನ ಶಿಕ್ಷಣ ಗುಣಮಟ್ಟ ಅದ್ಭುತವಾಗಿದೆ. ಶಿಕ್ಷಣದ ಜತೆಗೆ ಕೌಶಲ ಅಳವಡಿಸಿಕೊಂಡಾಗ ಜೀವನದಲ್ಲಿ ಬಹುಬೇಗನೆ ಸಾಧನೆ ಮಾಡಬಹುದು ಎಂದು ನಟಿ ಶೀತಲ್ ಶೆಟ್ಟಿ ಹೇಳಿದರು.
ಕೋಟ ವಿದ್ಯಾಸಂಘ, ಕೋಟ ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿ ಮುಖ್ಯಸ್ಥ ಕಮಲ್ ಕಾರಂತ್ ಐರೋಡಿ ‘ಜಾಗೃತಿ’ ಸಂಚಿಕೆ ಬಿಡುಗಡೆಗೊಳಿಸಿದರು. ವೈದ್ಯ ಡಾ.ಶ್ರೀಪತಿ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಬಳಿಕ ಹಳೇ ವಿದ್ಯಾರ್ಥಿಗಳಾದ ಕಮಲ್ ಕಾರಂತ್, ಶೀತಲ್ ಶೆಟ್ಟಿ, ಡಾ.ಸ್ವಸ್ತಿಕ್ ಉಪಾಧ್ಯ ಅವರನ್ನು ಅಭಿನಂದಿಸಲಾಯಿತು.
ವಿದ್ಯಾಸಂಘದ ಅಧ್ಯಕ್ಷ ಸಿಎಪಿ ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ವೈದ್ಯ ಡಾ.ಸ್ವಸ್ತಿಕ್ ಉಪಾಧ್ಯ ಪಿ., ಪ್ರಮುಖರಾದ ರಮಾನಂದ ಭಟ್, ಶ್ರೀಧರ ಉಪಾಧ್ಯ, ರಾಮದೇವ ಐತಾಳ್, ವೆಂಕಟೇಶ ಉಡುಪ, ಪ್ರೀತಿ ರೇಖಾ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿದರು. ಪ್ರೇಮಾನಂದ ವಂದಿಸಿದರು. ಸದಾಶಿವ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.