ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಶಾಮುಕ್ತ ಯುವಾ ಫಾರ್ ವಿಕಸಿತ ಭಾರತ್ ಉಡುಪಿ ಜಿಲ್ಲಾಮಟ್ಟದ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಎ.ಕಿರಣ್ ಕುವಾರ್ ಕೊಡ್ಗಿ, ಕೆ.ಆರ್.ನಾಯ್ಕ, ಡಾ.ಶುಭಕರ ಆಚಾರಿ ಮೊದಲಾದವರಿದ್ದರು.
ಕುಂದಾಪುರ: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾದರೆ ಅವರ ಕುಟುಂಬವಲ್ಲದೆ ಇಡೀ ಸವಾಜಕ್ಕೆ ತೊಂದರೆಯಾಗುತ್ತದೆ. ಯುವಜನರು ಡ್ರಗ್ಸ್ ಮೊದಲಾದ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾರ್ಜನೆ ಮೊದಲಾದ ಉತ್ತಮ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದು ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ ಹೇಳಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಉಡುಪಿ ಮೈ ಭಾರತ್ ಆಶ್ರಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನ್ಯಾಶನಲ್ ಸರ್ವೀಸ್ ಸ್ಕೀಮ್, ಹರೆಗೋಡು ಕಟ್‌ಬೇಲ್ತೂರು ಮಹಾವಿಷ್ಣು ಯುವಕ ಮಂಡಲ ಮತ್ತು ಕುಂದಾಪುರ ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸಯನ್ಸ್ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ನಶಾಮುಕ್ತ ಯುವ ಫಾರ್ ವಿಕಸಿತ ಭಾರತ್’ ಉಡುಪಿ ಜಿಲ್ಲಾಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಾತನಾಡಿದರು.
ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ ಉದ್ಘಾಟಿಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜಾ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು. ಮಹಾವಿಷ್ಣು ಯುವಕ ಮಂಡಲದ ರಾವೇಂದ್ರ ಚರಣ್ ನಾವಡ, ಜಿಲ್ಲಾ ಎನ್ನೆಸ್ಸೆಸ್ ಅಧಿಕಾರಿ ರಾಜೇಂದ್ರ, ಸಿಡಬ್ಲ್ಯುಸಿ ನಮ್ಮ ಭೂಮಿ ಸಂಸ್ಥೆಯ ಶಿವಾನಂದ ಶೆಟ್ಟಿ, ಕೃಪಾ ಎಂ.ಎಂ., ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸರೋಜಾ, ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ರಾಮಚಂದ್ರ, ಸತ್ಯನಾರಾಯಣ ಮೊದಲಾದವರಿದ್ದರು.
ಸಿಡಬ್ಲ್ಯುಸಿ ನಮ್ಮ ಭೂಮಿ ಸಂಸ್ಥೆಯ ನರಸಿಂಹ ಗಾಣಿಗ ಸ್ವಾಗತಿಸಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಯುವ ಸಮನ್ವಯ ಅಧಿಕಾರಿ ಉಲ್ಲಾಸ್ ಪ್ರಸ್ತಾವಿಸಿದರು. ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.