ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.  
ಉಡುಪಿ

ನೇಪಾಳ ಪ್ರವಾಹದಲ್ಲಿ ಸಿಲುಕಿದ್ದರೆ ನೀಡಿ ಮಾಹಿತಿ

ಉಡುಪಿ 

ಜಿಲ್ಲೆಯ ಕುಟುಂಬಸ್ಥರಿಗೆ ಜಿಲ್ಲಾಡಳಿತ ಮನವಿ

* ತುರ್ತು ಸಹಾಯವಾಣಿ 1077 ಕರೆ ಮಾಡಲು ಸಲಹೆ

ಉಡುಪಿ: ನೇಪಾಳ ಮತ್ತು ಟಿಬೆಟ್​ ಗಡಿಭಾಗದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯ ಹಾಗೂ ಭೂಕುಸಿತದಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವವರ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಉಡುಪಿ ಜಿಲ್ಲೆಯಿಂದ ಅಲ್ಲಿಗೆ ಪ್ರವಾಸ ಅಥವಾ ಯಾತ್ರೆಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದರೆ ಅಂತಹ ಕುಟುಂಬಗಳ ಸದಸ್ಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಅಪಾಯಕ್ಕೆ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರಲು ಉಡುಪಿ ಜಿಲ್ಲಾಡಳಿತವೂ ಸಹ ತುರ್ತು ಕ್ರಮ ಕೈಗೊಂಡಿದ್ದು, ನೇಪಾಳದಲ್ಲಿರುವ ಕುಟುಂಬಸ್ಥರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತುರ್ತು ಸಹಾಯವಾಣಿ ತೆರೆಯಲಾಗಿದೆ.

ನಿರ್ವಹಣಾ ಪ್ರಾಧಿಕಾರದ ಗೂಗಲ್​ ಲಿಂಕ್​ 

https://docs.google.com/forms/d/1gnw8B8vaYknr0Y2Lkn_fpWubPnKI6a8C4Em7co
1Shbk/edit

ಮೂಲಕ ಬಾಧಿತರ ವಿವರಗಳನ್ನು ನೀಡಬೇಕು.

ಮಾಹಿತಿ ಒದಗಿಸುವ ವಿಧಾನ: ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ಪ್ರಸ್ತುತ ಇರುವ ನಿಖರ ಸ್ಥಳ, ಮೊಬೈಲ್​ ಸಂಖ್ಯೆ ಹಾಗೂ ಇನ್ನಿತರ ತುರ್ತು ಅಗತ್ಯಗಳ ವಿವರಗಳನ್ನು ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.