ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿಭಾಗದ ಸಿ.ಇ., ಸಿ.ಎಸ್. ವಾಣಿಜ್ಯಿಕ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಭಟ್ ಮಾತನಾಡಿದರು. ಪ್ರಮುಖರಾದ ಶ್ಯಾಮಲಾ ಗಣೇಶ್, ರಮೇಶ್ ಪೂಜಾರಿ, ಪ್ರತಾಪ್ ಮೊದಲಾದವರಿದ್ದರು.  
ಉಡುಪಿ

ಪ್ರಾಮಾಣಿಕ ಪ್ರಯತ್ನವಿದ್ದರೆ ಪ್ರತಿಫಲ ನಿಶ್ಚಿತ

ಕುಂದಾಪುರ:

ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಪ್ರಾಮಾಣಿಕ ಪ್ರಯತ್ನ ಇದ್ದರೆ ಅದಕ್ಕೆ ಪ್ರತಿಫಲ ಸಿಗುತ್ತದೆ. ನಿರಂತರ ಪರಿಶ್ರಮ ಇದ್ದರೆ ಸಿಎ ಮತ್ತು ಸಿಎಸ್ ಸುಲಭವಾಗಿ ಪೂರ್ಣಗೊಳಿಸಬಹುದು ಎಂದು ತ್ರಿಷಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹೇಳಿದರು.

ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು. ವಿಭಾಗದ ಸಿ.ಎ., ಸಿ.ಎಸ್. ವಾಣಿಜ್ಯಿಕ ಓರಿಯಂಟೇಷನ್‌ನಲ್ಲಿ ಮಾತನಾಡಿದರು.
ಜನತಾ ಸಮೂಹ ಸಂಸ್ಥೆ ಕಾರ್ಯದರ್ಶಿ ಶ್ಯಾಮಲಾ ಗಣೇಶ್, ಜನತಾ ಪಿ.ಯು. ಕಾಲೇಜು ಉಪ ಪ್ರಾಂಶುಪಾಲ ರಮೇಶ್ ಪೂಜಾರಿ, ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರತಾಪ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕ ಅಭಿಜಿತ್ ನಿರೂಪಿಸಿದರು.