ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಉಡುಪಿಯ ಪ್ರಮೋದ ಮಧ್ವರಾಜ್​. 
ಉಡುಪಿ

ದೇವರು ಕೊಟ್ಟ ಶಕ್ತಿಯಲ್ಲಿ ಕೆಲಸ ಮಾಡುವೆ

* ಉಡುಪಿಯ ಪ್ರಮೋದ ಮಧ್ವರಾಜ್​ ಭರವಸೆ

* ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಉಡುಪಿ: ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ (ರಾಷ್ಟ್ರೀಯ ಮಹಾಮಂತ್ರಿ)ಯಾಗಿ ಉಡುಪಿಯ ಪ್ರಮೋದ ಮಧ್ವರಾಜ್​ ಅವರನ್ನು ಆಯ್ಕೆ ಮಾಡಲಾಗಿದೆ.

ಈ ವಿಚಾರವಾಗಿ ವಿಜಯವಾಣಿಯೊಂದಿಗೆ ಮಾತನಾಡಿ, ಪಕ್ಷದ ಹೈಕಮಾಂಡ್​, ರಾಜ್ಯ ಮುಖಂಡರ ಶಿಫಾರಸಿನ ಮೇರೆಗೆ ಬಿಜೆಪಿ ಇತರೆ ಹಿಂದುಳಿದ ವರ್ಗಗಳ ಮೋರ್ಚಾದ ಈ ಮಹತ್ತರ ಜವಾಬ್ದಾರಿ ಲಭಿಸಿದೆ. ಮುಖ್ಯವಾಗಿ ಬಿ.ಎಲ್​. ಸಂತೋಷ, ಬಿ.ವೈ. ವಿಜಯೇಂದ್ರ ಹಾಗೂ ಸಂಘದ ಪರಿವಾರದ ಆಶೀರ್ವಾದದಿಂದ ಪಕ್ಷದಲ್ಲಿ ಮಹತ್ತರ ಸ್ಥಾನಮಾನ ಲಭಿಸಿದೆ. ನೀಡಿದ ಜವಾಬ್ದಾರಿಯನ್ನು ನನಗೆ ದೇವರು ಕೊಟ್ಟ ಶಕ್ತಿಯಲ್ಲಿ ಒಬಿಸಿ ಮೋರ್ಚಾದ ಉನ್ನತಿಗೆ ಕೆಲಸ ಮಾಡುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನವೀನ್​ ಹಾಗೂ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರ್ ಪಾಲ್ ಮೌರ್ಯ ಸಲಹೆ-ಸೂಚನೆಯಂತೆ ಕಾರ್ಯ ನಿರ್ವಹಿಸುತ್ತೇನೆ. ವಿಶ್ವವೇ ಮೆಚ್ಚಿಕೊಂಡ ನಾಯಕ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಲಭಿಸಿದ ಈ ಮಹತ್ತರ ಹೊಣೆಯನ್ನು ಭಾರತೀಯ ಜನತಾ ಪಾರ್ಟಿಯ ಶ್ರೇಯಸ್ಸು ವರ್ಧಿಸಲು ಶ್ರಮಿಸುತ್ತೇನೆ ಎಂದರು.