ಕೋಟದಲ್ಲಿ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಶಿವಮೂರ್ತಿ ಕೆ. ವಿದ್ಯಾರ್ಥಿಗಳಿಗೆ ಗಿಡ ಹಸ್ತಾಂತರಿಸಿದರು. ಪ್ರಮುಖರಾದ ಸುಲೇವಾನ್ ಸಾಹೇಬ್, ವಿದ್ಯಾ ಸಾಲಿಯಾನ್, ಗಣೇಶ್ ಆಚಾರ್ ಮತ್ತಿತರರಿದ್ದರು. 
ಉಡುಪಿ

ಪರಿಸರ ಜಾಗೃತಿಯಲ್ಲಿ ಎಡವುತ್ತಿದೆ ಮನುಕುಲ

ಇಂದಿರಾ ಎನ್ ಕೆ

ಕೋಟ:

ಮಾ

ನವನಿಂದ ಪ್ರಕೃತಿ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ. ಇದರಿಂದ ಸಾಕಷ್ಟು ವಾತಾವರಣ ವೈಪರೀತ್ಯಗಳು, ಗುಡ್ಡ ಕುಸಿತದಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಮನುಕುಲ ಪದೇಪದೆ ಪರಿಸರ ಜಾಗೃತಿಯಲ್ಲಿ ಎಡವುತ್ತಿದೆ ಎಂದು ಕೆಎಂಎಫ್ ನಿರ್ದೇಶಕ ಶಿವಮೂರ್ತಿ ಕೆ. ಹೇಳಿದರು.

ಕೋಟ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಪೇತ್ರಿ ಅನ್ನಪೂರ್ಣ ನರ್ಸರಿ ಸಹಯೋಗದಲ್ಲಿ ಕೋಟತಟ್ಟು ಪಡುಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟತಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯೋಜನೆಯಲ್ಲಿ ಆಯೋಜಿಸಲಾಗಿದ್ದ 313ನೇ ವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಚವರ್ಣ ಸದಸ್ಯ ಮಹೇಶ್ ಬೆಳಗಾವಿ ಪರಿಸರ ಜಾಗೃತಿ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯಶಿಕ್ಷಕ ಗಣೇಶ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಸುಲೇವಾನ್ ಸಾಹೇಬ್, ಕೋಟತಟ್ಟು ಪಂಚಾಯಿತಿ ವಾಜಿ ಸದಸ್ಯೆ ವಿದ್ಯಾ ಸಾಲಿಯಾನ್, ಪ್ರಮುಖರಾದ ಸುಜಾತಾ ಉದಯ್, ಮನೋಹರ್ ಪೂಜಾರಿ, ಲಲಿತಾ ಪೂಜಾರಿ ಇದ್ದರು.
ವಸಂತಿ ಹಂದಟ್ಟು ಸ್ವಾಗತಿಸಿದರು. ಪ್ರಭಾಕರ್ ಬಿಎಸ್‌ಎನ್‌ಎಲ್ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು. ದಿನೇಶ್ ಆಚಾರ್ ಸಹಕರಿಸಿದರು.