ಮೂಡುಬಿದಿರೆಯ ಮೈಟ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಟಾಟಾ ಇಲೆಕ್ಟ್ರಾನಿಕ್ಸ್‌ನ ನೇಮಕಾತಿ ವಿಭಾಗ ಮುಖ್ಯಸ್ಥ ಕುಮಾರ್ ಆರ್ಮುಗಂ, ಮೈಟ್ ಅಧ್ಯಕ್ಷ ರಾಜೇಶ್ ಚೌಟ, ಆಡಳಿತ ಮಂಡಳಿ ಸದಸ್ಯೆ ರಾಜಲಕ್ಷ್ಮಿ ಚೌಟ, ಪ್ರಾಂಶುಪಾಲ ಡಾ.ಪ್ರಶಾಂತ್ ಸಿ.ಎಂ., ಉಪಪ್ರಾಂಶುಪಾಲ ಡಾ.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.  
ಉಡುಪಿ

ಬೆಳವಣಿಗೆಗೆ ಅಪಾರ ಅವಕಾಶ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಭಾರತ ಇಂದು ಬೆಳವಣಿಗೆಗೆ ಅಪಾರ ಅವಕಾಶ ನೀಡುತ್ತಿದೆ. ಮೈಟ್ ಸಂಸ್ಥೆ ಇದಕ್ಕೆ ಪೂರಕ ಶಿಕ್ಷಣ ನೀಡಿದ್ದು, ಪದವೀಧರರು ತಮ್ಮ ಕನಸುಗಳನ್ನು ದೃಢ ನಿಶ್ಚಯದಿಂದ ಈಡೇರಿಸಿಕೊಳ್ಳಬೇಕು ಎಂದು ಟಾಟಾ ಇಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿ. ನೇಮಕಾತಿ ವಿಭಾಗ ಮುಖ್ಯಸ್ಥ ಕುಮಾರ್ ಆರ್ಮುಗಂ ಹೇಳಿದರು.
ಸ್ವಾಯತ್ತ ಇಂಜಿನಿಯರಿಂಗ್ ಮತ್ತು ನಿರ್ವಹಣಾ ಅಧ್ಯಯನ ಕಾಲೇಜು ಆಗಿರುವ ಮೂಡುಬಿದಿರೆಯಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್(ಮೈಟ್) ಇದರ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಟ್ ಅಧ್ಯಕ್ಷ ರಾಜೇಶ್ ಚೌಟ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು, ಸ್ಪಷ್ಟ ಗುರಿ ಮತ್ತು ಜೀವನ ಪರ್ಯಂತ ಕಲಿಕೆಗೆ ಬದ್ಧರಾಗಿರಬೇಕು. ಸವಾಲುಗಳನ್ನು ಸ್ವೀಕರಿಸಿ ತಾವು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಬೇಕು ಎಂದರು.

ಪ್ರಾಂಶುಪಾಲ ಡಾ.ಪ್ರಶಾಂತ್ ಸಿ.ಎಂ. ಮಾತನಾಡಿ, 2024-25ರ ಬ್ಯಾಚ್ ವಿಟಿಯು ವಿಶ್ವವಿದ್ಯಾಲಯದ 16 ಶ್ರೇಯಾಂಕ, 3 ಪ್ರಥಮ ಶ್ರೇಯಾಂಕ ಪಡೆದುಕೊಂಡಿದೆ. ರಾಜ್ಯದ ಎಲ್ಲ ವಿಟಿಯು ಸಂಯೋಜಿತ ಕಾಲೇಜುಗಳಲ್ಲಿ ಮೈಟ್ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲೇ ಅತಿ ಹೆಚ್ಚು 32 ವಿದ್ಯಾರ್ಥಿಗಳು ಬಿ.ಇ. ಆನರ್ಸ್ ಪದವಿ ಪಡೆದಿದ್ದಾರೆ ಎಂದರು.
15ನೇ ಬ್ಯಾಚ್‌ನ 585 ಇಂಜಿನಿಯರಿಂಗ್ ಪದವೀಧರರು, 16ನೇ ಬ್ಯಾಚ್‌ನ 143 ಎಂಬಿಎ ಪದವೀಧರರು, 2ನೇ ಬ್ಯಾಚ್‌ನ 79 ಎಂಸಿಎ ಪದವೀಧರರು ಮತ್ತು ಒಬ್ಬರು ಪಿಎಚ್.ಡಿ ಪಡೆದವರಿಗೆ ಪ್ರಮಾಣ ಪತ್ರ ಪ್ರದಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯೆ ರಾಜಲಕ್ಷ್ಮಿ ಚೌಟ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ.ರಾಜಶೇಖರ್ ವಂದಿಸಿದರು. ಪ್ರಾಧ್ಯಾಪಕಿ ದೀಪ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ, ಚಿನ್ನದ ಪದಕ

ಎಂಬಿಎಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಅರ್ಪಿತಾ, 2ನೇ ರ‌್ಯಾಂಕ್ ಪಡೆದ ಶ್ವೇತಾ, ಎಂಸಿಎಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಶ್ವೇತಾ, 2ನೇ ರ‌್ಯಾಂಕ್ ಪಡೆದ ದೀಕ್ಷಾ ಪಿ.ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ರ‌್ಯಾಂಕ್ ಪಡೆದ ಲಿಥಿಕ್‌ಶಾನ್ನಾ, ಅಮೋಘ ಆಚಾರ್ಯ, ಭಾಗ್ಯಲಕ್ಷ್ಮಿ, ಅನಿರುದ್ಧ ಎಂ., ಹರಿಪ್ರಸಾದ್ ಬಿ., ಮೇದಿನಿ ಎಸ್.ರಾವ್, ಪ್ರದ್ಮುಮ್ನ ಮೂರ್ತಿ ಮತ್ತು ತೃಪ್ತೇಶ್ ಕುಮಾರ್ ಅವರಿಗೆ ಚಿನ್ನದ ಪದಕ ನೀಡಲಾಯಿತು. ದೀಕ್ಷಾ ಬಿ.ದೇವಾಡಿಗ(ಸಿಎಸ್‌ಇ-ಐಒಟಿಯಲ್ಲಿ ಪ್ರಥಮ ರ‌್ಯಾಂಕ್), ವರ್ಷಾ ಶೆಟ್ಟಿ(2ನೇ ರ‌್ಯಾಂಕ್), ಗಿರಿಧರ್ ಎನ್.ನಾಯಕ್(3ನೇ), ಪಜ್ವಲ್ ಡಿ.(3ನೇ), ಶರತ್ ಎಂ.ಡಿ.(4ನೇ), ರೀತು ಕೆ.(5ನೇ), ಇರಾಜ್ ಜಿ.ನಾಯಕ್(6ನೇ), ಅನ್ವಿತಾ ಜಿ.ರಾವ್(6ನೇ), ಶ್ರಾವ್ಯಾ ರೈ(7ನೇ), ಹೇಮಂತ್ ಬಿ.(7ನೇ), ಶ್ರೇಯಾ ಸುಧಾಕರ ನಾಯಕ್(8ನೇ), ಕೃತಿ ಕೆ.(8ನೇ), ಆಚಾರ್ಯ ಶ್ರೀಹರಿ ದಯಾನಂದ್(10ನೇ) ಮತ್ತು ಶಮ್ಯಾ(10ನೇ ರ‌್ಯಾಂಕ್) ಅವರನ್ನು ಗೌರವಿಸಲಾಯಿತು.