SUICIDE 
ಉಡುಪಿ

ಕಾಳ್ಯಂಗಾಡಿನಲ್ಲಿ ಗೃಹಿಣಿ ಆತ್ಮಹತ್ಯೆ

ಕಾಸರಗೋಡು: ಕೂಡ್ಲು ಮೀಪುಗುರಿ ಕಾಳ್ಯಂಗಾಡು ದೇವಿಕೃಪಾ ನಿವಾಸಿ ಸೂರ್ಯ ಎಂಬುವರ ಪತ್ನಿ ಶ್ಯಾಮಲಾ(50) ಮನೆಯಲ್ಲಿ ಯಾರೂ ಇಲ್ಲ ವೇಳೆ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಹಲವು ಸಮಯದಿಂದ ಕಾಲು ನೋವಿನಿಂದ ಬಳಲುತ್ತಿದ್ದ ಅವರು ಮಾನಸಿಕ ಖಿನ್ನತೆಯಿಂದ ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ಅಸಹಜ ಸಾವಿನ ಬಗ್ಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.