ಗಿಳಿಯಾರು ಹೊನ್ನಾರಿ ಬೊಬ್ಬರ್ಯ ದೈವಸ್ಥಾನ ಸಮೀಪದ ನಿವಾಸಿ ವೀರು ಪೂಜಾರಿ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು. ಪ್ರಮುಖರಾದ ಕಿರಣ್ ಕುಮಾರ್ ಕೊಡ್ಗಿ, ಆನಂದ ಸಿ.ಕುಂದರ್, ವಸಂತ ಗಿಳಿಯಾರು ಮೊದಲಾದವರಿದ್ದರು.
- ಆರ್ಥಿಕ ಸಂಕಷ್ಟದಲ್ಲಿದ್ದ ವೀರು ಪೂಜಾರಿಗೆ ಸೂರು
- 9 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥೆ
- ಜನಸೇವಾ ಟ್ರಸ್ಟ್, ಟೀಮ್ ಅಭಿಮತ ಸಾಥ್
ಗಿಳಿಯಾರು ಹೊನ್ನಾರಿ ಬೊಬ್ಬರ್ಯ ದೈವಸ್ಥಾನ ಸಮೀಪದ ನಿವಾಸಿ ಆರ್ಥಿಕ ಸಂಕಷ್ಟದಲ್ಲಿದ್ದ ವೀರು ಪೂಜಾರಿ ಕುಟುಂಬಕ್ಕೆ ಮೂಡು ಗಿಳಿಯಾರು ಜನಸೇವಾ ಟ್ರಸ್ಟ್ ಹಾಗೂ ಟೀಮ್ ಅಭಿಮತದ ಗೆಳೆಯರು ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರಿಸಿದರು.
ಪುತ್ರಿಗೆ ಉದ್ಯೋಗ
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವೀರು ಪೂಜಾರಿ ಪುತ್ರಿ ವಿಶೇಷಚೇತನ ಯುವತಿಗೆ ಉದ್ಯೋಗದ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ತಮ್ಮ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಜೂನ್ 1ರಿಂದ ಹಾಜರಾಗುವಂತೆ ಸೂಚಿಸಿದರು.
ಪ್ರಮುಖರ ಉಪಸ್ಥಿತಿ
ಜನಸೇವಾ ಟ್ರಸ್ಟ್ನ ಪ್ರವರ್ತಕ ವಸಂತ ಗಿಳಿಯಾರು, ಕೋಟ ಗ್ರಾ.ಪಂ. ಮಾಜಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ವಿಶ್ವವಿಖ್ಯಾತ ಜಾದೂಗಾರ ಸತೀಶ್ ಹೆಮ್ಮಾಡಿ ಮೊದಲಾದವರಿದ್ದರು.
ಕೆ.ಸಿ.ರಾಜೇಶ್ ನಿರೂಪಿಸಿದರು.