ಕಾಸರಗೋಡು: ತಲಪಾಡಿಯಲ್ಲಿ ಹೋಟೆಲ್ ಕಾರ್ಮಿಕನ ಶವ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ಹೃದಯ್‌ಪುರ ಹಟ್‌ಕೋಲಾಪಾರ ನಿವಾಸಿ ದೀಪಕ್ ಮೊಂಡಲ್(37) ಮೃತಪಟ್ಟವರು. ಹದಿನೈದು ದಿನಗಳ ಹಿಂದೆ ಅವರು ಇಲ್ಲಿನ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು.
ಮೂರು ದಿನದಿಂದ ಆರೋಗ್ಯ ಸರಿಯಿಲ್ಲವೆಂದು ತಿಳಿಸಿದ್ದ ಅವರು ರಜೆಯಲ್ಲಿದ್ದರು. ಬಳಿಕ ಕೆಲಸಕ್ಕೆ ಬಾರದಿರುವುದರಿಂದ ಬೇರೆ ಕಾರ್ಮಿಕರು ವಾಸಸ್ಥಳಕ್ಕೆ ತೆರಳಿ ನೋಡಿದಾಗ ದೀಪಕ್ ಮೊಂಡಲ್ ಮಲಗಿದ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಮಂಜೇಶ್ವರ ತಾಲೂಕು ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ಖಚಿತವಾಗಿದೆ.
ಈ ಬಗ್ಗೆ ಹೋಟೆಲ್ ಮಾಲೀಕ ಶೇಖ್ ರಸೀನ್ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.