Cyber crime 
ಉಡುಪಿ

ಖಾತೆಯಲ್ಲಿದ್ದ ಹಣ ಹೋಲ್ಡ್

ಪುತ್ತೂರು ಗ್ರಾಮಾಂತರ: ಖಾತೆದಾರರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಏಕಾಏಕಿ ಸ್ಥಗಿತಗೊಂಡಿದ್ದು, ಈ ಬಗ್ಗೆ ಖಾತೆದಾರ ಬ್ಯಾಂಕ್‌ನ ಮೇಲಧಿಕಾರಿಗಳಿಗೆ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಲ್ಲಿ ಖಾತೆ ಹೊಂದಿರುವ ಹನೀಫ್ ರೆಂಜಲಾಡಿ ಅವರ ಖಾತೆಯಲ್ಲಿದ್ದ 24,758.82 ರೂ. ಹೋಲ್ಡ್ ಆಗಿದೆ ಎಂದು ಮೊಬೈಲ್‌ಗೆ ಆ.2ರಂದು ಸಂಜೆ ಮೆಸೇಜ್ ಬಂದಿತ್ತು.
ತಿಂಗಳಾಡಿ ಶಾಖೆಯಲ್ಲಿ ವಿಚಾರಿಸಿದಾಗ ಹಣವನ್ನು ಚಂಡೀಗಡ ಸೈಬರ್ ಕ್ರೈಂ ಪೊಲೀಸರು ಹೋಲ್ಡ್ ಮಾಡಿದ್ದಾರೆ ಮ್ಯಾನೇಜರ್ ಎಂದು ತಿಳಿಸಿದ್ದರು. ಶಾಖಾ ಮ್ಯಾನೇಜರ್ ಸಂಬಂಧಪಟ್ಟ ಸೈಬರ್ ಕ್ರೈಂ ಪೊಲೀಸರಿಗೆ ಆ.3ರಂದು ಪೋರ್ಟಲ್ ಮೂಲಕ ದೂರು ನೀಡಿದ್ದಾರೆ. ಆದರೆ ದೂರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.