ಉಪ್ಪಿನಂಗಡಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಪುನಿತ್ ಅತ್ತಾವರ ಮಾತನಾಡಿದರು. ಪ್ರಮುಖರಾದ ಗಣೇಶ್ ಶೆಟ್ಟಿ, ಸುದರ್ಶನ್ ಎಂ., ರವಿನಂದನ್ ಹೆಗ್ಡೆ ಮೊದಲಾದವರಿದ್ದರು.
ಉಪ್ಪಿನಂಗಡಿ: ಆಂಗ್ಲರ ಆಡಳಿತದಿಂದ ವಿಮುಕ್ತಿ ಪಡೆಯುವ ಸಲುವಾಗಿ ಸಹಸ್ರಾರು ದೇಶಭಕ್ತರು ಪ್ರಾಣ ತ್ಯಾಗಗೈದರೂ ಅವರ ತ್ಯಾಗ ಅಣಕಿಸುವಂತೆ, ರಾಜಕೀಯ ಸ್ವಾರ್ಥ ಸಾಧನೆಗಾಗಿ ಅಖಂಡ ಭಾರತವನ್ನು ತ್ರಿಖಂಡಗೊಳಿಸಲಾಯಿತು. ಲಕ್ಷಾಂತರ ಭಾರತೀಯರ ಮಾರಣ ಹೋಮಕ್ಕೆ ಕಾರಣವಾದ ದೇಶ ವಿಭಜನೆ ದುರಂತ ಕತೆ ಹುತಾತ್ಮ ದೇಶಭಕ್ತರ ಕನಸನ್ನು ನುಚ್ಚುನೂರಾಗಿಸಿದ ಕತೆಯೂ ಆಗಿದೆ ಎಂದು ವಿಶ್ವ ಹಿಂದೂ ಪರಿಷತ್- ಬಜರಂಗ ದಳದ ಮುಖಂಡ ಪುನಿತ್ ಅತ್ತಾವರ ಹೇಳಿದರು.
ಗುರುವಾರ ಉಪ್ಪಿನಂಗಡಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಮಾತನಾಡಿದರು. ಭಾರತ ಸ್ವತಂತ್ರಗೊಂಡ ಬಳಿಕವೂ ಸ್ವಾರ್ಥಿ ರಾಜಕಾರಣಿಗಳ ತುಷ್ಟೀಕರಣದಿಂದಾಗಿ ದೇಶದಲ್ಲಿ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಯತ್ನ ನಡೆಯುತ್ತಿದೆ ಎಂದರು.
ನಿವೃತ್ತ ಯೋಧ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಹಿಪ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್ ಎಂ., ಬಜರಂಗ ದಳದ ಮುಂದಾಳು ರವಿನಂದನ್ ಹೆಗ್ಡೆ, ಪ್ರಮುಖರಾದ ರಾಜಶೇಖರ್ ರೈ, ಸಂತೋಷ್, ಕಿಶೋರ್, ಸಂತೋಷ್ ಅಡೆಕ್ಕಲ್, ಗುಣಕರ, ಲಕ್ಷ್ಮಣ್ ಗೌಡ, ಹರಿರಾಮಚಂದ್ರ, ರವೀಂದ್ರ ಆಚಾರ್ಯ, ಸುರೇಶ್, ವಿದ್ಯಾಧರ ಜೈನ್, ಲಕ್ಷ್ಮೀಶ್ ನಾಯ್ಕ, ಕೈಲಾರ್ ರಾಜಗೋಪಾಲ ಭಟ್, ದಯಾನಂದ ಎನ್., ಯಶೋಧರ ಆಚಾರ್ಯ, ಚಂದ್ರ ಹೆಗ್ಡೆ, ಉಷಾಚಂದ್ರ ಮುಳಿಯ, ಮಹೇಶ್, ಶರತ್ ಕೋಟೆ, ವೆಂಕಪ್ಪ ಗೌಡ , ಸಂದೀಪ್ ಮಡಿವಾಳ ಉಪಸ್ಥಿತರಿದ್ದರು.