ಹಿಲಿಯಾಣ ಭಟ್ರಾಡಿಯಲ್ಲಿ ಸಾಂಪ್ರದಾಯಿಕ ಹಣಬಿನ ಹಬ್ಬ. 
ಉಡುಪಿ

ಹಿಲಿಯಾಣದಲ್ಲಿ ‘ಹಣಬಿನ ಹಬ್ಬ’ ಮೆರಗು

ಸಿದ್ದಾಪುರ: ಕರಾವಳಿ ಭಾಗದಲ್ಲಿ ಶಿವರಾತ್ರಿಯಲ್ಲಿ ವಿಶಿಷ್ಟವಾಗಿ ಆಚರಿಸುವ ಹಣಬಿನ ಹಬ್ಬ ಹಿಲಿಯಾಣ ಭಟ್ರಾಡಿ ಶ್ರೀ ಮಹಿಷಮರ್ಧಿನಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಫೆ.16ರಂದು ಆರಂಭಗೊಂಡು 17ರಂದು ಸಂಜೆ ಸವಾಪನಗೊಳ್ಳಲಿದೆ.
ಭಟ್ರಾಡಿ ಶ್ರೀಮಹಿಷಮರ್ಧಿನಿ ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಜ್ಯೋತಿಷ್ಯ ವಿದ್ವಾನ್ ಹಾಲಾಡಿ ತಟ್ಟುವಟ್ಟು ಟಿ.ವಾಸುದೇವ ಜೋಯಿಸ್ ನೇತೃತ್ವದಲ್ಲಿ ನಡೆದ ತಾಂಬೂಲಾರೂಢ ಪ್ರಶ್ನೆಯಲ್ಲಿ ಈಶ್ವರನಿಗೆ ಪ್ರಿಯವಾದ ಹಣಬು ಆಚರಿಸಬೇಕೆಂದು ಬಂದಿರುವುದರಿಂದ 60 ವರ್ಷಗಳಿಂದ ಆಚರಿಸದ ಹಣಬು ಆಚರಣೆ ಇದೀಗ ಏಳನೇ ವರ್ಷದ ಹಣಬಿನ ಹಬ್ಬವನ್ನು ಆಚರಿಸುತ್ತಿದ್ದಾರೆ.

ಮೊದಲ ದಿನ ಅಡಕೆ ಹಣಬು ಸುಡುವ ಮೂಲಕ ಹಣಬಿನ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಅನಂತರ ಮರುದಿನ ಗ್ರಾಮಸ್ಥರು ಒಗ್ಗೂಡಿಕೊಂಡು ಶಿವನ ಆಲಯದಲ್ಲಿ ವಿಶಿಷ್ಟವಾಗಿ ಹಣಬಿಗೆ ಬೆಂಕಿ ಸ್ಪರ್ಶಿಸಲಾಗುತ್ತದೆ.

ಶಿವರಾತ್ರಿ ಜಾಗರಣೆ

ಗ್ರಾಮೀಣ ಸಮುದಾಯದ ಮನೆತನದವರು ಎರಡು ಮೂರು ದಿನಗಳ ಕಾಲ ರಾತ್ರಿ ಸಮಯದಲ್ಲಿ ಸೀಮೆ ಎಣ್ಣೆ ದೀಪದ ಮೂಲಕ ಶಿವನನ್ನು ಕೊಂಡಾಡುತ್ತಾ ಇಡೀ ಗ್ರಾಮದ ಮನೆಗಳಿಗೆ ತೆರಳುವ ಸಂಪ್ರದಾಯವಿದೆ. ಡೋಲು, ಜಾಗಟೆ, ಕೊಳಲನೂದುತಾ ಉತ್ಸಾಹದಿಂದ ಕುಣಿಯುವ ಮೂಲಕ ಮನೆ ಮನೆಗೆ ಭೇಟಿ ನೀಡಿ ಮನೆಯವರು ನೀಡುವ ಆತಿಥ್ಯ ಹಾಗೂ ತೆಂಗಿನ ಕಾಯಿ, ಅಕ್ಕಿ, ಎಲೆ ಅಡಕೆ ಕಾಣಿಕೆ ಸ್ವೀಕರಿಸಿ ಜಾಗರಣೆಯೊಂದಿಗೆ ಮಹಾಶಿವರಾತ್ರಿ ಆಚರಿಸುತ್ತಾರೆ.

ಹಣಬು ಆಚರಣೆ ಬಗ್ಗೆ ತಾಂಬೂಲರೂಢ ಪ್ರಶ್ನೆಯಲ್ಲಿ ಬಂದಿರುವುದರಿಂದ 60 ವರ್ಷಗಳ ಬಳಿಕ ಕಳೆದ 6 ವರ್ಷಗಳಿಂದ ಹಣಬು ಆಚರಿಸುತ್ತಿದ್ದೇವೆ. ಜ್ಯೋತಿಷ್ಯರ ಸಲಹೆಯಂತೆ ಹಣಬು ಆಚರಣೆ ನಂತರ ಹಿಲಿಯಾಣ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ನಿರ್ವ್ನಿವಾಗಿ ನಡೆದಿವೆ.