ಶ್ರೀನಾಥ್ ಎಂ.ಪಿ. ಗ್ರಾಮೀಣ ಮಟ್ಟದ ಪುಸ್ತಕೋತ್ಸವ ಉದ್ಘಾಟಿಸಿದರು. ಪುಂಜಾಲಕಟ್ಟೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಧರಣೇಂದ್ರ ಜೈನ್, ಗುರುವಾಯನಕೆರೆ ಶಾರದಾ ಗೆಳೆಯರ ಬಳಗದ ಅಧ್ಯಕ್ಷ ತಿಲಕರಾಜ್ ಮೊದಲಾದವರಿದ್ದರು.
ಬೆಳ್ತಂಗಡಿ: ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕ ಓದುವವರು ವಿರಳವಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಮಟ್ಟದ ಪುಸ್ತಕೋತ್ಸವ ನಡೆಸುತ್ತಿರುವುದು ಶ್ಲಾಘನೀಯ. ಪ್ರತಿ ಶಾಲಾ, ಕಾಲೇಜುಗಳಲ್ಲಿ ಇಂತಹ ಪುಸ್ತಕ ಪ್ರದರ್ಶನ ನಡೆದರೆ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶ್ರೀನಾಥ್ ಎಂ.ಪಿ. ಹೇಳಿದರು.
ಗುರುವಾಯನಕೆರೆ ಶ್ರೀ ಶಾರದಾ ಕಲಾಮಂಟಪ ಗೆಳೆಯರ ಬಳಗ ಆಶ್ರಯದಲ್ಲಿ ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ಸಹಯೋಗದೊಂದಿಗೆ ಗ್ರಾಮೀಣ ಮಟ್ಟದ ಪುಸ್ತಕೋತ್ಸವ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಂಜಾಲಕಟ್ಟೆ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಧರಣೇಂದ್ರ ಜೈನ್, ಗುರುವಾಯನಕೆರೆ ಶಾರದಾ ಗೆಳೆಯರ ಬಳಗದ ಅಧ್ಯಕ್ಷ ತಿಲಕರಾಜ್, ಶಾರದಾ ಭಜನಾ ಮಂಡಳಿಯ ನಿಕಟಪೂರ್ವ ಅಧ್ಯಕ್ಷೆ ರೀತಾ ವೈ.ಆಚಾರ್ಯ, ಕಾರ್ಯಕ್ರಮದ ಆಯೋಜಕ ದೇವಿಪ್ರಸಾದ್ ಆಚಾರ್ಯ ಗುರುವಾಯನಕೆರೆ, ಡಾ.ವೇಣುಗೋಪಾಲ ಶರ್ಮ, ಕುವೆಟ್ಟು ಗ್ರಾಪಂ ಮಾಜಿ ಸದಸ್ಯ ಮಂಜುನಾಥ ಕುಂಬಳೆ ಉಪಸ್ಥಿತರಿದ್ದರು.
ಆನಂದ ಕೋಟ್ಯಾನ್ ಸ್ವಾಗತಿಸಿದರು. ಸುಧಾ ಆರ್.ಸಾಲಿಯಾನ್ ವಂದಿಸಿದರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.