ಕೋಟೇಶ್ವರ ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ ಯೇಸುವಿನ ವಾರ್ಷಿಕ ಹಬ್ಬ ನಡೆಯಿತು. ಪಾವ್ಲ್ ರೇಗೊ, ಜೋ ತಾವ್ರೊ, ಜೋಸ್ವಿ ಸಿದ್ದಕಟ್ಟೆ ಇತರರಿದ್ದರು.  
ಉಡುಪಿ

ಅನ್ಯಾಯಕ್ಕೆ ಒಳಗಾದವರಿಗೆ ನೆರವಾಗಿ

ಇಂದಿರಾ ಎನ್ ಕೆ
ಕುಂದಾಪುರ: ನಾವೂ ಬಡವರ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ಆಸರೆಯಾಗಬೇಕು. ಯೇಸು ಭಗವಾನರು ಕೂಡ ಇದೇ ಹಾದಿಯನ್ನು ಅನುಸರಿಸಿದ್ದರು. ಈ ಹಿನ್ನೆಲೆಯಲ್ಲಿ ಯೇಸುವಿನ ಹಬ್ಬ ಆಚರಿಸುತ್ತೇವೆ ಎಂದು ಉದ್ಯಾವಾರ ಧರ್ಮಕೇಂದ್ರದ ಧರ್ಮಗುರು ಅನಿಲ್ ಡಿಸೋಜ ಹೇಳಿದರು.
ಕೋಟೇಶ್ವರ ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ ಯೇಸುವಿನ ವಾರ್ಷಿಕ ಹಬ್ಬದ ಪ್ರಯುಕ್ತ ಪವಿತ್ರ ಬಲಿದಾನ ಅರ್ಪಿಸಿ ಸಂದೇಶ ನೀಡಿದರು.
ಕುಂದಾಪುರ ವಲಯ ಪ್ರಧಾನ ಪಾವ್ಲ್ ರೇಗೊ, ಕಾರ್ಮೆಲ್ ಧರ್ಮಗುರುಗಳಿಗೆ ಶುಭಕೋರಿದರು. ವಿವಿಧ ವಲಯಗಳ ಧರ್ಮಗುರುಗಳು, ಧರ್ಮಭಗಿನಿಯರು, ಭಕ್ತರು, ಕಟ್ಕೆರೆ ಬಾಲಯೇಸುವಿನ ಆಶ್ರಮದ ಜೋ ತಾವ್ರೊ, ಜೋಸ್ವಿ ಸಿದ್ದಕಟ್ಟೆ, ಜೋನ್ ಸಿಕ್ವೇರಾ, ಸ್ಟೀವನ್ ಡಿಸೋಜ ಉಪಸ್ಥಿತರಿದ್ದರು. ಪ್ರವೀಣ್ ಪಿಂಟೊ ವಂದಿಸಿದರು.