ಹೆಬ್ರಿಯ ಹೆಬ್ಬೇರಿ ತಾಲೂಕುಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಮತ್ತು ಸಂಜೀವಿನಿ ಸಂತೆಯನ್ನು ಹೆಬ್ರಿ ಗ್ರಾಪಂ ಪಿಡಿಒ ಸದಾಶಿವ ಸೇರ್ವೆಗಾರ್ ಉದ್ಘಾಟಿಸಿದರು. 
ಉಡುಪಿ

ಹೆಬ್ಬೇರಿ ಸಂಜೀವಿನಿ ಮಹಿಳಾ ಚಂಡೆ ಬಳಗವನ್ನು ಲೋಕಾರ್ಪಣೆ

ಹೆಬ್ರಿ: ಹೆಬ್ರಿಯ ಹೆಬ್ಬೇರಿ ತಾಲೂಕುಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಮತ್ತು ಸಂಜೀವಿನಿ ಸಂತೆ ಹಾಗೂ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಿಸಲಾದ ಹೆಬ್ಬೇರಿ ಸಂಜೀವಿನಿ ಮಹಿಳಾ ಚಂಡೆ ಬಳಗವನ್ನು ಲೋಕಾರ್ಪಣೆ ಮಾಡಲಾಯಿತು.
ಯೋಜನಾ ನಿರ್ದೇಶಕ ವಿಜಯ ಕೆ. ಸಂಜೀವಿನಿ ಸಂತೆ ಹಾಗೂ ಮಹಾಸಭೆ ಉದ್ಘಾಟಿಸಿದರು. ವಾದಕ ುುಕ್ತ ಸವಾಜ ನಿರ್ಮಿಸುವಲ್ಲಿ ಜನರ ಪಾತ್ರದ ಬಗ್ಗೆ ಪ್ರಾಂಶುಪಾಲೆ ಅನಿತಾ ಶೆಟ್ಟಿ, ಲಿಂಗತ್ ಆಧಾರಿತ ದೌರ್ಜನ್ಯ ಮತ್ತು ಲಿಂಗ ಸವಾನತೆ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಬಗ್ಗೆ ಪ್ರಮೀಳಾ, ಸಂಜೀವಿನಿ ಯೋಜನೆ ಪ್ರಗತಿ ಬಗ್ಗೆ ನವ್ಯಾ ತಿಳಿಸಿದರು.
ಸಂಜೀವಿನಿ ಯೋಜನೆಯಲ್ಲಿ ಜಿಪಿಎಲ್‌ಎಫ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಅವರನ್ನು ಗೌರವಿಸಲಾಯಿತು.
ಹೆಬ್ರಿ ಗ್ರಾಪಂ ಪಿಡಿಒ ಸದಾಶಿವ ಸೇರ್ವೆಗಾರ್, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಕಾರ್ಯದರ್ಶಿ ಸುಲೇಖಾ ಜವಾ ಖರ್ಚು ಮತ್ತು ವರದಿ ಮಂಡಿಸಿದರು. ಅಧ್ಯಕ್ಷೆ ಸುಜಾತಾ ಎಸ್.ಕುವಾರ್ ಹೆಬ್ಬೇರಿ ತಾಲೂಕು ಒಕ್ಕೂಟದ ಸಾಧನೆ ಮತ್ತು ಮುಂದಿನ ಯೋಜನೆಯನ್ನು ತಿಳಿಸಿದರು.
ತಾಲೂಕು ಮೇಲ್ವಿಚಾರಕಿ ಸುಕೇತಾ, ಬಿಆರ್‌ಪಿ, ಪಿಆರ್‌ಐ ಅಮಿತಾ, ಸಂಜೀವಿನಿ ಸಂದ ಪದಾಧಿಕಾರಿಗಳು, ಸದಸ್ಯರು, ಎಂಬಿಕೆ, ಎಲ್‌ಒಆರ್‌ಪಿ, ಕೃಷಿ ಸಖಿ ಮತ್ತು ಪಶು ಸಖಿಯರು ಉಪಸ್ಥಿತರಿದ್ದರು. ಉವಾ ಸ್ವಾಗತಿಸಿದರು. ಕೌಶಲ್ಯಾ, ಬಬಿತಾ ವಂದಿಸಿದರು. ಎಂಬಿಕೆ ತೀರ್ಥಕಲಾ ಮತ್ತು ಸುಜಾತಾ ನಿರೂಪಿಸಿದರು.