ಹೆವ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕಿವಿಯ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಬಿ.ರಾವೇಂದ್ರ ಪೈ, ಕಿರಣ್ ದೇವಾಡಿಗ, ಲವ ಬಂಗೇರ, ಡಾ.ಅಂಕಿತಾ ಕಲ್ಮಾಡಿ ಮತ್ತಿತರರಿದ್ದರು.  
ಉಡುಪಿ

ಸೂಕ್ತ ಚಿಕಿತ್ಸೆಯಿಂದ ಶ್ರವಣ ದೋಷ ನಿವಾರಣೆ

ಇಂದಿರಾ ಎನ್ ಕೆ
ಕುಂದಾಪುರ: ಮನುಷ್ಯನಲ್ಲಿ ದೋಷಗಳು ಕಾಣಿಸಿಕೊಳ್ಳುವುದು ಸಹಜ. ಹಲವರು ತಮ್ಮ ದೋಷಗಳನ್ನು ಗುಣಪಡಿಸಿಕೊಳ್ಳಲು ಸಾಧ್ಯವಾಗದೆ ಜೀವನವನ್ನೇ ಬಲಿ ಕೊಡುತ್ತಾರೆ. ಶ್ರವಣ ದೋಷ ಉಳ್ಳವರು ಸೂಕ್ತ ಚಿಕಿತ್ಸೆ ಮೂಲಕ ಅಥವಾ ಶ್ರವಣ ಯಂತ್ರ ಅಳವಡಿಸಿ ಇತರರಂತೆ ಜೀವನ ನಡೆಸಲು ಸಾಧ್ಯವಿದೆ ಎಂದು ಹೆವ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರ ಹೇಳಿದರು.
ಹೆವ್ಮಾಡಿ ಜನತಾ ಪದವಿಪೂರ್ವ ಕಾಲೇಜು, ಕುಂದಾಪುರ ಕುಲಾಲ ಸವಾಜ ಸುಧಾರಕ ಸಂ, ಕುಂದಾಪುರ ಸಿಟಿ ಜೆಸಿಐ, ಹೆವ್ಮಾಡಿ ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂ ಮತ್ತು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಆಶ್ರಯದಲ್ಲಿ ಟೀಮ್ ಈಶ್ವರ ಮಲ್ಪೆ ಸಹಯೋಗದೊಂದಿಗೆ ಹೆವ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಶುಕ್ರವಾರ ಕಿವಿಯ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಕುಂದಾಪುರ ಸಿಟಿ ಜೆಸಿಐ ಪೂರ್ವಾಧ್ಯಕ್ಷ ರಾವೇಂದ್ರ ಕುಲಾಲ್ ಶುಭಾಶಂಸನೆಗೈದರು. ಅರ್ಹ ಫಲಾನುಭವಿಗಳಿಗೆ ಶ್ರವಣ ಯಂತ್ರ ಸಹಾಯಧನ ವಿತರಿಸಲಾಯಿತು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ ಉಪಾಧ್ಯಕ್ಷ ಬಿ.ರಾವೇಂದ್ರ ಪೈ, ಕುಂದಾಪುರ ಸಿಟಿ ಜೆಸಿಐನ ಕಿರಣ್ ದೇವಾಡಿಗ, ಟೀಮ್ ಈಶ್ವರ ಮಲ್ಪೆ ತಂಡದ ಲವ ಬಂಗೇರ, ಡಾ.ಅಂಕಿತಾ ಕಲ್ಮಾಡಿ, ಉಪಪ್ರಾಂಶುಪಾಲ ಸತೀಶ್, ಹೈಸ್ಕೂಲು ವಿಭಾಗದ ಮುಖ್ಯಶಿಕ್ಷಕ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಅಲ್ತಾರು ನಾಗರಾಜ್ ನಿರೂಪಿಸಿದರು.