ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್
* ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ
* ತಪ್ಪಾಗಿದ್ದರೆ ಆಯೋಗಕ್ಕೆ ದೂರು ನೀಡಿ
ಉಡುಪಿ: ಮತದಾನದ ಹಕ್ಕಿನಿಂದ ರಾಜ್ಯದ ಯಾವ ಮತದಾರರೂ ಕೂಡ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಜನಜಾಗೃತಿ ಮೂಡಿಸುತ್ತಿದೆ. ಎಸ್ಐಆರ್ ಮಾಡುವುದು ಸರ್ಕಾರದ ಕೆಲಸವಲ್ಲ. ಅದನ್ನು ಚುನಾವಣಾ ಆಯೋಗ ಮಾಡುತ್ತಿದೆ. ಏನೇ ತಪ್ಪುಗಳಿದ್ದರೂ ಅಥವಾ ಸರಿಯಾಗಿ ನಡೆಯದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು.
ಉಡುಪಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಬಳಿ ಶನಿವಾರ (ಜು.4) ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ. ಸರ್ಕಾರ ಕೇವಲ ಮಾಹಿತಿ ನೀಡುವ ಕಾರ್ಯ ಮಾತ್ರ ಮಾಡುತ್ತಿದೆ.ಎಸ್ಐಆರ್ ಫಾರಂಗಳನ್ನು ಸಾಮೂಹಿಕವಾಗಿ ವಿತರಿಸುವುದು ಅಥವಾ ಬೇರೆ ರೀತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಾಗಿದ್ದಲ್ಲಿ ಆಯೋಗಕ್ಕೆ ದೂರು ನೀಡಬೇಕು. ಇಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ ಎಂದರು.
ಟೌನ್ಶಿಪ್ ಅಗತ್ಯವಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅದಕ್ಕೆ ಹೊಂದಿಕೊಳ್ಳಲೇಬೇಕಿದೆ. ತಂತ್ರಜ್ಞಾನ ಅಥವಾ ಅಭಿವೃದ್ಧಿ ಬೇಡವೆಂದರೆ ಹೇಗೆ? ಇಷ್ಟ ಇರುವ ರೈತರು ಭೂಮಿ ನೀಡಲಿದ್ದಾರೆ. ಟೌನ್ಶಿಪ್ ರಚನೆ ಕಾರ್ಯ ಸರ್ಕಾರ ಮಾಡಲಿದೆ. ಹೊಸ ರೇಷನ್ ಕಾರ್ಡ್ ವಿತರಣೆಗೂ ಚಿಂತನೆ ನಡೆಯುತ್ತಿದ್ದು, ಸರ್ಕಾರದ ಹಂತದಲ್ಲಿ ಕೆಲವೊಂದು ಕ್ರಮ ಆಗುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.