ಗೋಕರ್ಣದ ಅಶೋಕೆಯಲ್ಲಿನ ಶ್ರೀರಾಮಚಂದ್ರಾಪುರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ (Anna Brahma) ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಹವ್ಯಕ ಮಹಾಸಭೆ ವತಿಯಿಂದ ಅಧ್ಯಕ್ಷ ಡಾ.ಗಿರಿಧರ ಕಜೆ, ರವಿ ನಾರಾಯಣ ಪಟ್ಟಾಜೆ ಮತ್ತಿತರ ಪ್ರಮುಖರು ಪೂರ್ಣಲ ಸಮರ್ಪಿಸಿ ಆಶೀರ್ವಾದ ಪಡೆದರು.
- ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ
- ಅಗ್ನಿ ಚತುರಾವಸ್ಥೆಗಳ ಪರಿಚಯ
- ಅನ್ನಂ-ಬ್ರಹ್ಮ ಪ್ರವಚನ ಮಾಲಿಕೆ
ಗೋಕರ್ಣ: ಧರ್ಮಶಾಸ ನಮಗೆ ಧರ್ಮವನ್ನು ತಿಳಿಸುತ್ತದೆ. ಯೋಗಶಾಸ ಯೋಗ ಸಾಧನೆಯನ್ನು ಮತ್ತು ಆಯುರ್ವೇದ ಶಾಸ ಆರೋಗ್ಯ ಮರ್ಮವನ್ನು ಕೊಡುಗೆಯಾಗಿತ್ತಿದೆ.
ಈ ಹಿನ್ನೆಲೆಯಲ್ಲಿ ಯಾವುದು ಆರೋಗ್ಯವೋ ಅದೇ ಯೋಗ. ಯೋಗವೇ ಧರ್ಮ ಮತ್ತು ಧರ್ಮವೇ ಅಧ್ಯಾತ್ಮ ಅಥವಾ ಆತ್ಮಜ್ಞಾನವಾಗಿದೆ.
ಇವೆಲ್ಲವೂ ಬೇರೆ ಬೇರೆ ದಾರಿಗಳ ಮೂಲಕ ಒಂದೇ ಗುರಿಯನ್ನು ಸೇರುತ್ತವೆ ಎಂದು ಅನ್ನಬ್ರಹ್ಮ (Anna Brahma) ಚಾತುರ್ಮಾಸ್ಯ ವ್ರತಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ದೇಹದಲ್ಲಿನ ಅಗ್ನಿಯ ಅವಸ್ಥೆಗಳನ್ನು ಪ್ರವಚನದ ಮುಖೇನ ತಿಳಿಸಿದರು.
ಸಮತ್ವಂ ಯೋಗಮುಚ್ಯತೆ: ಗೀತಾಚಾರ್ಯ ಶ್ರೀಕಷ್ಣ ಜೀವನ ಸಮತ್ವ ಅಥವಾ ಸಾಮ್ಯವೇ ಯೋಗ ಎಂದು ಉಪದೇಶಿಸಿದ್ದಾನೆ.
ಉಣ್ಣುವ ಅಡುಗೆಯಿಂದ ಹಿಡಿದು ಶಾರೀರಿಕ ಆಕಾರದವರೆಗೆ, ಆಡುವ ಮಾತಿನ ಸ್ವರದಿಂದ ಮೊದಲ್ಗೊಂಡು ಶರೀರದ ಧಾತುಗಳ ತನಕ ಸಾಮ್ಯತೆಯೇ ಪ್ರಧಾನ. ಎಲ್ಲೆಡೆ ಸಮತ್ವಕ್ಕೆ ಪ್ರಾಶಸ್ತ್ಯವಿದೆ.
ಇದೇ ರೀತಿ ಶರೀರದ ಆರೋಗ್ಯ ನಿರ್ವಹಣೆಯಲ್ಲಿ ಕೂಡ ಅಂತರಾಗ್ನಿಯ ಸಮತ್ವ ಅಥವಾ ಸಾಮ್ಯ ಮುಖ್ಯ.
ಅಗ್ನಿ ಪ್ರಕಾರಗಳಲ್ಲಿ ಮಂದ, ತೀಕ್ಷ್ಣ, ವಿಷಮ ಮತ್ತು ಸಮಾಗ್ನಿ ಎಂಬ ಚತುರ್ವಿಧಗಳು. ಅಗ್ನಿಯ ರಾಜಧಾನಿ ಮೇಲೆ ಕ ಅಥವಾ ಶ್ಲೇಷ್ಮ ದಾಳಿಯಿಟ್ಟರೆ ಅಗ್ನಿ ಮಂದವಾಗುತ್ತದೆ. ವಾತದ ದಾಳಿಯಾದರೆ ಅಗ್ನಿ ಸಮತೋಲನ ತಪ್ಪಿ ವಿಷಮವಾಗುತ್ತದೆ.
ಇನ್ನು ಪಿತ್ಥದ ಆಕ್ರಮಣ ಅಗ್ನಿಯನ್ನು ತೀಕ್ಷ್ಣವಾಗಿಸುತ್ತದೆ. ವಾತ, ಕ ಮತ್ತು ಪಿತ್ಥಗಳು ಸಹಕಾರಿಗಳಾದರೆ ಸಮಾಗ್ನಿ. ಈ ಹಿನ್ನೆಲೆಯಲ್ಲಿ ಬದುಕು ಮತ್ತು ಆರೋಗ್ಯ ಪ್ರಸನ್ನವಾಗಿರಬೇಕೆಂದರೆ ಅಗ್ನಿ ಸಮವಾಗಿ ಪ್ರಸನ್ನವಾಗಿರಬೇಕು.
ಅಗ್ನಿಯ ರಾಜ್ಯ ಕೆಟ್ಟರೆ ಸಂಪೂರ್ಣ ಶರೀರ ಸಾಮ್ರಾಜ್ಯ ಕೆಡುವುದು ನಿಶ್ಚಿತ ಎಂದು ಸಮಾಗ್ನಿಯ ರಕ್ಷಣೆ ಮಾಡುವಂತೆ ಶ್ರೀಗಳು ಅಗ್ನಿಯ ಅವಸ್ಥೆಗಳನ್ನು ವಿವರಿಸಿದರು.
ಜೀರ್ಣಾಜೀರ್ಣಂ ನಿರೂಪಯಮ್: ಅಗ್ನಿಯ ಅವಸ್ಥೆಗಳ ಹಿನ್ನೆಲೆಯಲ್ಲಿ ಆಯುರ್ವೇದ ಶಾಸ ನಾವು ನಿತ್ಯ ಕನ್ನಡಿಯನ್ನು ನೋಡಿಕೊಳ್ಳುವಂತೆ ಆರೋಗ್ಯಕ್ಕಾಗಿ ನಿತ್ಯ ಎಚ್ಚರಾಗುತ್ತಿದ್ದಂತೆ ಅಗ್ನಿಯ ಅವಲೋಕನದ ಮೂಲಕ ಜೀರ್ಣ ಮತ್ತು ಅಜೀರ್ಣದ ನಿರೂಪಣೆಗೆ ಮುಂದಾಗಬೇಕು.
ಆಯುರ್ವೇದ ಶಾಸದ ಬೆಳಕಲ್ಲಿ ಬದುಕಿದರೆ ದೇಹದ ಸಾಮ್ಯಾವಸ್ಥೆಯಿಂದ ಬಾಳು ಪವಿತ್ರ ಮತ್ತು ಭಗವತ್ ಸಮರ್ಪಣೆಗೆ ಯೋಗ್ಯವಾಗುತ್ತದೆ. ಹೀಗೆ ಭಾರತೀಯ ಜೀವನ ಪದ್ಧತಿ ಮತ್ತು ಆಯುರ್ವೇದ ಹೇಗೆ ರೋಗವೇ ಬಾರದಂತೆ ಬದುಕಬೇಕು ಎನ್ನುವುದನ್ನು ಕಲಿಸುತ್ತದೆ ಎಂದರು.
ಭಾನುವಾರ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆಯ ವತಿಯಿಂದ ಶ್ರೀಗುರುಭಿಕ್ಷಾ ಸೇವೆ ಸಮರ್ಪಿತವಾಯಿತು.
ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ ಮಹಾಸಭೆಯ ಯೋಜಿತ ಕಾರ್ಯಕ್ರಮಗಳಿಗೆ ಶ್ರೀಗಳ ಮಾರ್ಗದರ್ಶನ ಮತ್ತು ಪೂರ್ಣಾನುಗ್ರಹಕ್ಕೆ ಪ್ರಾರ್ಥಿಸಿದರು.
ಮಹಾಸಭೆ ಪರವಾಗಿ ರವಿ ನಾರಾಯಣ ಪಟ್ಟಾಜೆ ಶ್ರೀಗುರುಭಿಕ್ಷಾ ಸೇವೆ ಸಲ್ಲಿಸಿದರು. ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ಟ ಯಲಹಂಕ ಮತ್ತು ನಿರ್ದೇಶಕರು ಸಂಚಾಲಕರು ಉಪಸ್ಥಿತರಿದ್ದರು. ಇದೇ ವೇಳೆ ಗೋಮಾಂತಕ ಸಮಾಜದವರಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು.