ಡಾ. ಟಿಎಂಎ ಪೈ ಆಸ್ಪತ್ರೆ, ಉಡುಪಿ. 
ಉಡುಪಿ

ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಪ್ಯಾಕೇಜ್​

* ವಿಶ್ವ ಆರೋಗ್ಯ ದಿನದ ನಿಮಿತ್ತ ಆಯೋಜನೆ

* ರಿಯಾಯಿತಿ ದರದಲ್ಲಿ ವೈದ್ಯಕೀಯ ಸೌಲಭ್ಯ

ಉಡುಪಿ: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಏ.7ರಂದು ಆಚರಿಸಲಾಗುವ ವಿಶ್ವ ಆರೋಗ್ಯ ದಿನದ ನಿಮಿತ್ತ ಏಪ್ರಿಲ್​ ತಿಂಗಳಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ವಿವಿಧ ಆರೋಗ್ಯ ತಪಾಸಣೆಯ ಪ್ಯಾಕೇಜ್​ ಆಯೋಜಿಸಿದೆ. 
ಸತತ 4ನೇ ವರ್ಷದ ವಿಶೇಷ ವೈದ್ಯಕೀಯ ಸೌಲಭ್ಯ ಇದಾಗಿದೆ. ಕಳೆದ ವರ್ಷ ನೂರಾರು ಜನರು ಪ್ರಯೋಜನ ಪಡೆದಿದ್ದಾರೆ. ಆರೋಗ್ಯ ರಕ್ಷಣೆ ಮತ್ತು ಸಮುದಾಯದಲ್ಲಿ ರೋಗಗಳ ಆರಂಭಿಕ ಪತ್ತೆ ಹಚ್ಚುವಲ್ಲಿ, ಜನರ ಆರೋಗ್ಯದ ಪೂರ್ವಭಾವಿ ಜಾಗೃತಿ, ಮೇಲ್ವಿಚಾರಣೆಗಾಗಿ ಆಸ್ಪತ್ರೆಯ ನಿರಂತರ ಬದ್ಧತೆಯ ಪ್ರತೀಕವಾಗಿದೆ. 

ವಿವಿಧ ತಪಾಸಣೆ

ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯವಾಕ್ಯ 'ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಂತುಕೊಳ್ಳಿ' ಎನ್ನುವುದಾಗಿದೆ. ಅದಕ್ಕನುಗುಣವಾಗಿ ವಿವಿಧ ವಯೋಮಾನದವರ ಅಗತ್ಯ ಪೂರೈಸಲು ಈ ಪ್ಯಾಕೇಜ್​ ವಿನ್ಯಾಸಗೊಳಿಸಲಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡ ಮತ್ತು ಯಕೃತ್​ನ ಅಸ್ವಸ್ಥತೆ ಮತ್ತು ಕೆಲವು ಕ್ಯಾನ್ಸರ್​ಗಳನ್ನು ಮೊದಲೇ ಗುರುತಿಸುವುದು ಈ ತಪಾಸಣೆಯ ಗುರಿಯಾಗಿದೆ.

ವಯಸ್ಕರಿಗೆ ಮಾರ್ಗದರ್ಶನ

ರೋಗನಿರ್ಣಯ ಸೇವೆಗಳೊಂದಿಗೆ ಈ ಪ್ಯಾಕೇಜ್​ನಲ್ಲಿ ವಯಸ್ಕರ ರೋಗ ನಿರೋಧಕತೆಯ ಕುರಿತು ಮಾರ್ಗದರ್ಶನವನ್ನೂ ಒಳಗೊಂಡಿದೆ. ಇದು ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಾಗಿ ಕಡೆಗಣಿಸಲ್ಪಡುವ ಅಂಶವಾಗಿದೆ. ಹಿರಿಯ ನಾಗರಿಕರು ಮತ್ತು ಅಸ್ತಿತ್ವದಲ್ಲಿರುವ ಆರೋಗ್ಯ ಪರಿಸ್ಥಿತಿಯ ವ್ಯಕ್ತಿಗಳಿಗೆ ಇನ್ಫ್ಲುಯೆನ್ಸ, ನ್ಯುಮೋನಿಯಾ, ಹೆಪಟೈಟಿಸ್​ ಮತ್ತು ಟೆಟನಸ್​ಗೆ ಲಸಿಕೆಗಳೂ ಸಹ ನಿರ್ಣಾಯಕವಾಗುತ್ತವೆ. ಮಾಹಿತಿಗಾಗಿ ಅಥವಾ ಆರೋಗ್ಯ ತಪಾಸಣೆ ಪ್ಯಾಕೇಜ್​ ನಿಗದಿಪಡಿಸಲು ಮೊ.ಸಂ. 7259361555 ಸಂಪರ್ಕಿಸಬಹುದು. 
"

ಇಂದಿನ ವೇಗದ ಜೀವನ ಶೈಲಿಯಿಂದಾಗಿ ಅನೇಕ ಆರೋಗ್ಯ ಪರಿಸ್ಥಿತಿಗಳು ಗಂಭೀರ ತೊಡಕಾಗಿ ಬೆಳೆಯುವವರೆಗೆ ಗಮನಕ್ಕೇ ಬರುವುದಿಲ್ಲ. ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ ಮತ್ತು ಸುಧಾರಿತ ಜೀವನ ಗುಣಮಟ್ಟಕ್ಕಾಗಿ ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯ. ಈ ಉಪಕ್ರಮದಿಂದ ಜನರಿಗೆ ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೆ ಗಮನ ಹರಿಸಲು ಸಹಾಯವಾಗಲಿದ್ದು, ಅಂತಹ ಪೂರ್ವಭಾವಿ ವಿಧಾನ ಅನುಸರಿಸಲು ಟಿಎಂಎ ಪೈ ಆಸ್ಪತ್ರೆ ಪ್ರೋತ್ಸಾಹಿಸುತ್ತದೆ.